CCL 2025 : ಇಂದಿನಿಂದ ಸೆಲೆಬ್ರೆಟಿ ಕ್ರಿಕೆಟ್‌ ಲೀಗ್‌ ಆರಂಭ....!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕ್ರೀಡೆ

CCL 2025 :

ಸೆಲೆಬ್ರೆಟಿ ಕ್ರಿಕೆಟ್‌ ಲೀಗ್‌ 2025 ಇಂದಿನಿಂದ ಆರಂಭವಾಗಲಿದೆ, CCL 2025 11 ನೇ ಸೀಸನ್‌ ಆಗಿದ್ದು, ಬೆಂಗಳೂರಿನಲ್ಲಿ ಅದ್ದೂರಿ ಚಾಲನೆ ಸಿಗಲಿದೆ. ಆರಂಭಿಕ ಪಂದ್ಯ ಚೆನ್ನೈ ರೈನೋಸ್‌ ಹಾಗೂ ಬೆಂಗಾಲ್‌ ಟೈಗರ್ಸ್‌ ಮಧ್ಯೆ ಆರಂಭವಾದರೆ, ಎರಡನೇ ಪಂದ್ಯ ಕರ್ನಾಟಕ ಬುಲ್ಡೋಜರ್‌ ಹಾಗೂ ತೆಲುಗು ವಾರಿಯರ್‌ ಮಧ್ಯೆ ನಡೆಯಲಿದೆ.

ಕರ್ನಾಟಕ ಬುಲ್ಡೋಜರ್ಸ್‌ ತಂಡ ಈ ಬಾರಿ ಕಪ್‌ ಗೆಲ್ಲಲೇ ಬೇಕು ಅಂತ ಕಸರತ್ತು ನಡೆಸಿದೆ. ಕಿಚ್ಚ ಸುದೀಪ್‌ ಮತ್ತೇ ನಾಯಕನಾಗಿದ್ದು, ಈ ಬಾರಿ ಸುದೀಪ್‌ ಬಲಿಷ್ಠ ತಂಡವನ್ನು ಕಟ್ಟಿದ್ದಾರೆ. ಹಾಗೇ ಕರ್ನಾಟಕ ಬುಲ್ಡೋಜರ್‌ ತಂಡಕ್ಕೆ ಗೋಲ್ಡನ್‌ ಸ್ಟಾರ್‌ ಗಣೇಶ್‌, ಡಾರ್ಲಿಂಗ್‌ ಕೃಷ್ಣ, ಸುನೀಲ್‌ ರಾವ್‌, ಬಿಗ್‌ ಬಾಸ್‌ ಖ್ಯಾತಿಯ ತ್ರಿವಿಕ್ರಮ್‌ ಅಂತಹ ಆಟಗಾರರು ತಾರಾ ಮೆರುಗು ನೀಡಲಿದ್ದಾರೆ.

CCL 2025 ಇಂದಿನಿಂದ ಪಂದ್ಯಗಳು ಆರಂಭವಾಗಿದ್ದು, ಬೆಂಗಾಲ್‌ ಟೈಗರ್ಸ್‌ ಹಾಗೂ ಚೆನ್ನೈ ರೈನೋಸ್‌ ಮೊದಲ ಪಂದ್ಯ ಆರಂಭವಾಗಿದ್ದು, ಈಗಾಗಲೇ ಟಾಸ್‌ ಮುಗಿದಿದ್ದು ಟಾಸ್‌ ಗೆದ್ದ ಬೆಂಗಾಲ್‌ ಟೈಗರ್ಸ್‌ ತಂಡ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒಂದೇ ಒಂದು ದಿನ CCL ಪಂದ್ಯಗಳು ನಡೆಯಲಿವೆ. ಈ ಎರಡು ಪಂದ್ಯ ಬಿಟ್ಟರೆ ಮತ್ತೆ ಚಿನ್ನಸ್ವಾಮಿಯಲ್ಲಿ ಮ್ಯಾಚ್ ಗಳು ಇಲ್ಲ. ಕರ್ನಾಟಕ ಬುಲ್ಡೋಜರ್ಸ್‌ ಹಾಗೂ ತೆಲುಗು ವಾರಿಯರ್ಸ್‌ ತಂಡದ ಪಂದ್ಯವನ್ನು ವೀಕ್ಷಿಸಲು ಪಂದ್ಯ ಆರಂಭವಾಗುವುದಕ್ಕೂ ಎರಡು ದಿನ ಮುನ್ನವೇ ಎಲ್ಲಾ ಟಿಕೆಟ್ ಗಳು ಸೋಲ್ಡ್‌ ಔಟ್‌ ಆಗಿವೆ,

 

Author:

share
No Reviews