ರಾಜ್ಯ: ಇಂದಿನಿಂದ ಜಾತಿ ಗಣತಿ ಸರ್ವೇ ಕಾರ್ಯ ಆರಂಭ

ರಾಜ್ಯ: 

ಜಾತಿಗಣತಿ ಪರ- ವಿರೋಧದ ಚರ್ಚೆ ನಡುವೆಯೇ ಕರ್ನಾಟಕದಲ್ಲಿ ಇಂದಿನಿಂದ ಜಾತಿಗಣತಿ ಆರಂಭಿಸಲಾಗಿದೆ. ಜಾತಿ ಗಣತಿ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಕಾಂಗ್ರೆಸ್‌ ಸರ್ಕಾರ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಇಂದಿನಿಂದ ಜಾತಿಗಣತಿ ಕಾರ್ಯವನ್ನು ಆರಂಭಿಸಿದೆ. ಆನ್‌ಲೈನ್‌ನಲ್ಲಿ ಈ ಜಾತಿಗಣತಿ ಆರಂಭವಾಗಲಿದ್ದು, ಆನ್‌ ಲೈನ್‌ ಅಫ್ಲಿಕೇಷನ್‌ಗೆ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಿದ್ದು, ಮೂರು ಹಂತದಲ್ಲಿ ಜಾತಿಗಣತಿ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ನಾಗಮೋಹನ್‌ ದಾಸ್‌ ಸಮಿತಿ ಶಿಫಾರಸ್ಸಿನ್ವಯ ಇಂದಿನಿಂದ ಮೇ 17ರವರೆಗೆ ಮನೆ ಮನೆ ಗಣತಿಯನ್ನು ಆರಂಭಿಸಲಾಗಿದೆ. ನಾಗ ಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗದ ನೇತೃತ್ವದಲ್ಲಿ ಆ್ಯಪ್ ಮೂಲಕ ಪರಿಶಿಷ್ಟ ಸಮುದಾಯದ ಜನರ ವಿವರ ಸಂಗ್ರಹ ಕಾರ್ಯ ಆರಂಭವಾಗಿದ್ದು, ಸರ್ವೇ ಕಾರ್ಯಕ್ಕೆ ಸಿಎಂ ಅಧಿಕೃತವಾಗಿ ಚಾಲನೆ ನೀಡಿದರು.

ಇನ್ನು ಈ ಜಾತಿಗಣತಿ ಕಾರ್ಯವು ಒಟ್ಟು ಮೂರು ಹಂತದಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಮನೆ ಮನೆಗೆ ತೆರಳಿ ಅಂಕಿ ಅಂಶ ಸಂಗ್ರಹ ಮಾಡಲಾಗುತ್ತೆ. ಎರಡನೇ ಹಂತದಲ್ಲಿ ಮೇ 19 ರಿಂದ 21ರವರೆಗೆ ವಿಶೇಷ ಶಿಬಿರ ಆಯೋಜನೆ ಮಾಡಲಾಗುದ್ದು, ಶಿಬಿರದಲ್ಲೂ ತೆರಳಿ ಮಾಹಿತಿ ನೀಡಬಹುದಾಗಿದೆ. ಇನ್ನು ಮೂರನೇ ಹಂತದಲ್ಲಿ ಆನ್‌ಲೈನ್‌ ಮೂಲಕ ಮಾಹಿತಿ ಸಂಗ್ರಹ ಮಾಡಲು ಅವಕಾಶ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಒಳಮೀಸಲಾತಿ ಜಾರಿ ಸಂಬಂಧ ಸಮೀಕ್ಷೆ ನಡೆಯುತ್ತಿದ್ದು, ಇಲಾಖೆಯಿಂದ ಸಹಾಯವಾಣಿಯನ್ನು ಕೂಡ ತೆರೆಯಲಾಗಿದ್ದು, ದಿನದ 24 ಗಂಟೆಯೂ ಕೂಡ ಕರೆ ಮಾಡಬಹುದು ಎಂದು ಸಿದ್ದರಾಮಯ್ಯ ಹೇಳಿದ್ರು. ಇನ್ನು ಜಾತಿ ಗಣತಿಯಲ್ಲಿ ಎಸ್‌ಸಿಗಳು ತಮ್ಮ ಜಾತಿಯನ್ನು ಸ್ವಯಂ ಆಗಿ ಘೋಷಿಸಿಕೊಳ್ಳಬಹುದು ಎಂದು ಸಿಎಂ ಸ್ಪಷ್ಟಪಡಿಸಿದರು.

ರಾಜ್ಯಾದ್ಯಂತ ಜಾತಿಗಣತಿಗೆ ಚಾಲನೆ ನೀಡಿದ್ದು, ಇತ್ತ ತುಮಕೂರು ನಗರದ ಕೋತಿತೋಪು ಬಳಿ ಡಿಸಿ ಶುಭಕಲ್ಯಣ್‌ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒ ಪ್ರಭು ಜಾತಿ ಗಣತಿಗೆ ಚಾಲನೆ ನೀಡಿದ್ರು. ಈ ವೇಳೆ ಮಾತನಾಡಿದ ಡಿಸಿ ಶುಭಕಲ್ಯಾಣ್‌ ಜಾತಿ ಗಣತಿ ಸರ್ವೇ ಮಾಡಲು ಬರುವವರಿಗೆ ಸರಿಯಾದ ಮಾಹಿತಿ ನೀಡಿ ಎಂದು ಹೇಳಿದರು.

ಸಾಕಷ್ಟು ಚರ್ಚೆ, ವಿವಾದ ನಡುವೆಯೂ ಜಾತಿ ಗಣತಿ ಕಾರ್ಯ ನಡೆಯುತ್ತಿದ್ದು, ಜನರು ಸರಿಯಾಗಿ ಮಾಹಿತಿ ನೀಡಿ ಒಳಮೀಸಲಾತಿ ಜಾರಿಗೆ ಅನುವು ಮಾಡುವಂತೆ ಸರ್ಕಾರ ತಿಳಿಸಿದೆ.

Author:

...
Keerthana J

Copy Editor

prajashakthi tv

share
No Reviews