ಛಾವ ಚಿತ್ರವು ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಆಧರಿಸಿದೆ. ಚಿತ್ರದ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.ದೇಶಾದ್ಯಂತ ಛಾವ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೇವಲ 3 ದಿನಕ್ಕೆ 121 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾಗೆ ಪ್ರೇಕ್ಷಕರಿಂದ ಪಾಸಿಟಿವ್ ವಿಮರ್ಶೆ ಸಿಕ್ಕಿದೆ. ಈ ಗೆಲುವಿನಿಂದಾಗಿ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಅವರ ಬೇಡಿಕೆ ಹೆಚ್ಚಿದೆ.
ಲಕ್ಷ್ಮಣ್ ಉಟೇಕರ್ ನಿರ್ದೇಶನ ಮಾಡಿರುವ ಛಾವಾ ಚಿತ್ರವು ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 31.40 ಕೋಟಿ ಗಳಿಕೆ ಮಾಡಿತ್ತು. ಸುಮಾರು 2 ವರ್ಷಗಳ ನಂತರ ವಿಕ್ಕಿ ಕೌಶಲ್‌ಗೆ ಅದ್ದೂರಿ ಓಪನಿಂಗ್ ಸಿಕ್ಕಿದೆ. ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಕ್ಕಿ ಕೌಶಲ್ ಅವರು ಜೋಡಿಯಾಗಿ ಅಭಿನಯಿಸಿರುವ ಛಾವ ಸಿನಿಮಾ ಸೂಪರ್ ಹಿಟ್ ಆಗಿದೆ. ಫೆಬ್ರವರಿ 14ರಂದು ಈ ಸಿನಿಮಾ ಬಿಡುಗಡೆ ಆಗಿತ್ತು.
ಐತಿಹಾಸಿಕ ಕಥಾಹಂದರ ಹೊಂದಿರುವ ಈ ಚಿತ್ರದ ಬಗ್ಗೆ ಆರಂಭದಲ್ಲಿ ದೊಡ್ಡ ಕ್ರೇಜ್ ಇರಲಿಲ್ಲ. ಆದರೆ ರಿಲೀಸ್ ಬಳಿಕ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಕಲೆಕ್ಷನ್ ಹೆಚ್ಚುತ್ತಾ ಹೋಯಿತು. ಈಗ ಮೂರು ದಿನಕ್ಕೆ ಈ ಸಿನಿಮಾ ಬರೋಬ್ಬರಿ 121 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಸೂಪರ್ ಹಿಟ್ ಎನಿಸಿಕೊಂಡಿದೆ. 4 ದಿನಗಳಲಲಿ ಚಿತ್ರ ಭರ್ಜರಿ ಕಲೆಕ್ಷನೆ ಮಾಡುತ್ತಿದೆ..