bollywood : 3ನೇ ದಿನಕ್ಕೆ 121 ಕೋಟಿ ಕಲೆಕ್ಷನ್ ಮಾಡಿದ ಛಾವ

chava movie poster
chava movie poster
ಹಿಂದಿ

ಛಾವ ಚಿತ್ರವು ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಆಧರಿಸಿದೆ. ಚಿತ್ರದ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.ದೇಶಾದ್ಯಂತ ಛಾವ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕೇವಲ 3 ದಿನಕ್ಕೆ 121 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾಗೆ ಪ್ರೇಕ್ಷಕರಿಂದ ಪಾಸಿಟಿವ್ ವಿಮರ್ಶೆ ಸಿಕ್ಕಿದೆ. ಈ ಗೆಲುವಿನಿಂದಾಗಿ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಅವರ ಬೇಡಿಕೆ ಹೆಚ್ಚಿದೆ.

ಲಕ್ಷ್ಮಣ್ ಉಟೇಕರ್ ನಿರ್ದೇಶನ ಮಾಡಿರುವ ಛಾವಾ ಚಿತ್ರವು ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 31.40 ಕೋಟಿ ಗಳಿಕೆ ಮಾಡಿತ್ತು. ಸುಮಾರು 2 ವರ್ಷಗಳ ನಂತರ ವಿಕ್ಕಿ ಕೌಶಲ್‌ಗೆ ಅದ್ದೂರಿ ಓಪನಿಂಗ್ ಸಿಕ್ಕಿದೆ. ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಕ್ಕಿ ಕೌಶಲ್ ಅವರು ಜೋಡಿಯಾಗಿ ಅಭಿನಯಿಸಿರುವ ಛಾವ ಸಿನಿಮಾ ಸೂಪರ್​ ಹಿಟ್ ಆಗಿದೆ. ಫೆಬ್ರವರಿ 14ರಂದು ಈ ಸಿನಿಮಾ ಬಿಡುಗಡೆ ಆಗಿತ್ತು.

ಐತಿಹಾಸಿಕ ಕಥಾಹಂದರ ಹೊಂದಿರುವ ಈ ಚಿತ್ರದ ಬಗ್ಗೆ ಆರಂಭದಲ್ಲಿ ದೊಡ್ಡ ಕ್ರೇಜ್ ಇರಲಿಲ್ಲ. ಆದರೆ ರಿಲೀಸ್ ಬಳಿಕ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ಕಲೆಕ್ಷನ್ ಹೆಚ್ಚುತ್ತಾ ಹೋಯಿತು. ಈಗ ಮೂರು ದಿನಕ್ಕೆ ಈ ಸಿನಿಮಾ ಬರೋಬ್ಬರಿ 121 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಸೂಪರ್​ ಹಿಟ್ ಎನಿಸಿಕೊಂಡಿದೆ.  4 ದಿನಗಳಲಲಿ  ಚಿತ್ರ ಭರ್ಜರಿ ಕಲೆಕ್ಷನೆ ಮಾಡುತ್ತಿದೆ..

 

 

Author:

share
No Reviews