CINEMA:
ದೊಡ್ಮನೆಯ ಯುವರಾಜ್‌ಕುಮಾರ್32 ನೇ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಆದರೆ ನಿನ್ನೆ ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದಿದ್ದಕ್ಕೆ ನಟ ಯುವ ರಾಜ್ಕುಮಾರ್ ಕೇಕ್ ಕತ್ತರಿಸಲಿಲ್ಲ. ಹುಟ್ಟುಹಬ್ಬಕ್ಕೆ ವಿಶೇಷವಾಗಿ ಎಕ್ಕ ಸಿನಿಮಾ ಟೀಸರ್ ಬಿಡುಗಡೆ ಆಗಬೇಕಿತ್ತು.
ಆದರೆ ಸಿನಿಮಾ ಟ್ರೀಸರ್ ಬಿಡುಗಡೆಯನ್ನೂ ಕೂಡ ಮುಂದೂಡಲಾಗಿದೆ. ಬೆಳಗ್ಗೆ ಬಿಡುಗಡೆ ಆಗಬೇಕಿದ್ದ ಟೀಸರ್ ಇಂದು ಸಂಜೆ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
ಯುವ ಚಿತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದ ಯುವ ಎಕ್ಕ ಚಿತ್ರದ ಮೂಲಕ ವಿಭಿನ್ನವಾದ ಪಾತ್ರವನ್ನು ಮಾಡುತ್ತಿದ್ದಾರೆ. ಇನ್ನು ಎಕ್ಕ ಚಿತ್ರವನ್ನು ರೋಹಿತ್ ಪದಕಿ ಡೈರೆಕ್ಷನ್ ಮಾಡಿದ್ದಾರೆ.