ಹುಳಿಯಾರು : ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಅಪಘಾತದಲ್ಲಿ ಲಾರಿ ಪಲ್ಟಿಯಾಗಿರುವುದು.
ಅಪಘಾತದಲ್ಲಿ ಲಾರಿ ಪಲ್ಟಿಯಾಗಿರುವುದು.
ತುಮಕೂರು

ಹುಳಿಯಾರು :

ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್‌ ಸವಾರ ಗುರುತು ಸಿಗದ ರೀತಿಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಧಾರುಣ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿ ಯಗಚಿಹಳ್ಳಿಯಲ್ಲಿ ನಡೆದಿದೆ. ಬುಕ್ಕಾಪಟ್ಟಣದ ನಿವಾಸಿ ಅಮೀರ್‌ ಸಾಬ್‌ ಎಂಬುವರು ಮೃತ ದುರ್ದೈವಿಯಾಗಿದ್ದಾರೆ.

ಹುಳಿಯಾರು ಪೊಲೀಸ್‌ ಠಾಣಾ ವ್ಯಾಪ್ತಿಯ ಎನ್‌ ಹೆಚ್‌ 69ರ ಯಗಚಿಹಳ್ಳಿ ಹತ್ತಿರ ನಿನ್ನೆ ಈ ಅಪಘಾತ ಸಂಭವಿಸಿದೆ. ಹುಳಿಯಾರು ಕಡೆಯಿಂದ ರಾಗಿ ಚೀಲ ತುಂಬಿಕೊಂಡು ಬರುತ್ತಿದ್ದ ಲಾರಿಯು ಗಾಣದಾಳು ಗ್ರಾಮದ ಕಡೆಯಿಂದ ಬರುತ್ತಿದ್ದ ಟಿವಿಎಸ್‌ ಎಕ್ಸೆಲ್‌ ವಾಹನಕ್ಕೆ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದ ಭೀಕರತೆಗೆ ಬೈಕ್‌ ಸವಾರನ ಗುರುತು ಸಿಗದ ರೀತಿಯಲ್ಲಿ ಮುಖ ಛಿದ್ರಛಿದ್ರವಾಗಿದ್ದು, ಮೊಣಕಾಲಿನಿಂದ ಮೂಳೆ ಹೊರಬಂದಿದೆ. ಈ ಭೀಕರ ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಜಮಾಯಿಸಿ ರಸ್ತೆಗೆ ಶಾಮಿಯಾನ ಹಾಕಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು. ಈ ವೇಳೆ ಘಟನಾ ಸ್ಥಳಕ್ಕೆ ಪೋಲಿಸರು ಆಗಮಿಸಿ ಸ್ಥಳೀಯರ ಮನವೊಲಿಸಿದ ಬಳಿಕ ಪ್ರತಿಭಟನೆಯನ್ನ ಕೈಬಿಟ್ಟರು.

ಈ ಸಂಬಂಧ ಹುಳಿಯಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸಲಿದ್ದಾರೆ.

Author:

share
No Reviews