ಸಿನಿಮಾ-ಟಿವಿ : ಇಷ್ಟು ದಿನ ಸಿಂಗಲ್ ಆಗಿದ್ದ ಶಮಂತ್ ಬ್ರೋ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ನಿನ್ನೆಯಷ್ಟೇ ಇದೀಗ ಶಮಂತ್ ಬ್ರೋ ಗೌಡ ಅದ್ಧೂರಿಯಾಗಿ ರಿಸೆಪ್ಶನ್ ಮಾಡಿಕೊಂಡಿದ್ದರು. ತಮ್ಮ ಅದ್ಭುತ ಅಭಿನಯದ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರೋ ಶಮಂತ್ ಬ್ರೋ ಗೌಡ ಪ್ರೀತಿಸಿದ ಹುಡುಗಿ ಜೊತೆಗೆ ಮದುವೆ ಆಗಿದ್ದಾರೆ.
ಕುಟುಂಬದ ಆಶೀರ್ವಾದದೊಂದಿಗೆ, ಸಂಪ್ರದಾಯಬದ್ಧವಾಗಿ, ತಾವು ಪ್ರೀತಿಸಿದ್ದ ಹುಡುಗಿ ಮೇಘನಾ ಜೊತೆಗೆ ಕಿರುತೆರೆ ನಟ ಶಮಂತ್ ಬ್ರೋ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನೆನ್ನೆ ರಾತ್ರಿ ನಡೆದ ಅದ್ಧೂರಿ ರಿಸೆಪ್ಶನ್ ಕಾರ್ಯಕ್ರಮದಲ್ಲಿ ಟಿವಿ ನಟರು, ನಟಿಯರು, ಗಾಯಕರು ಮತ್ತು ಸ್ಯಾಂಡಲ್ವುಡ್‌ನ ಗಣ್ಯ ವ್ಯಕ್ತಿಗಳು ಆಗಮಿಸಿ ನವಜೋಡಿಗೆ ಹಾರೈಸಿದ್ದಾರೆ.
ಶಮಂತ್ ಬ್ರೋ ಗೌಡ ಮೂಲತಃ ಉತ್ತರ ಕರ್ನಾಟಕದವರು ಎಂಬುದು ಹಲವರಿಗೆ ತಿಳಿದಿಲ್ಲ. ಅವರ ಪೂರ್ಣ ಹೆಸರು ಶಮಂತ್ ಹಿರೇಮಠ. ಇನ್ನೊಂದೆಡೆ, ಮೇಘನಾ ಕುಟುಂಬ ಮರಾಠಿ ಹಿನ್ನೆಲೆಯದು. ಹೀಗಾಗಿ ಎರಡೂ ಶೈಲಿ ಕೊಂಚ ಸಾಮ್ಯತೆ ಇದ್ದು, ಸಂಪ್ರದಾಯಬದ್ಧವಾಗಿ ಈ ಜೋಡಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ.