ಬೀದರ್‌ : ಬ್ಯಾಂಕ್ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿ ದರೋಡೆ

ಹಣದ ಪೆಟ್ಚಿಗೆ ಹೊತ್ತೊಯ್ಯುತ್ತಿರುವ ದುರ್ಷರ್ಮಿಗಳು
ಹಣದ ಪೆಟ್ಚಿಗೆ ಹೊತ್ತೊಯ್ಯುತ್ತಿರುವ ದುರ್ಷರ್ಮಿಗಳು
ಬೀದರ್‌

ಬೀದರ್ :ಹಾಡಹಗಲೇ ಗುಂಡಿನ ದಾಳಿಯೊಂದು ನಡೆದುಹೋಗಿದೆ. ಬೀದರ್‌ನ ಹೃದಯ ಭಾಗ ಶಿವಾಜಿ ಚೌಕ್​ನಲ್ಲಿ ಎಟಿಎಂಗೆ ಹಣ ತುಂಬಿಸುತ್ತಿದ್ದ ಇಬ್ಬರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಎಟಿಎಂಗೆ ಹಣ ತುಂಬುವ ವಾಹನದ ಹಿಂಭಾಗ ವ್ಯಕ್ತಿಯೊಬ್ಬನ ಶವ ಬಿದ್ದಿದ್ದರೆ, ಕ್ಷಣಮಾತ್ರದಲ್ಲೇ ಸಿನಿಮೀಯ ರೀತಿಯಲ್ಲಿ ಇಬ್ಬರು ದುರ್ಷರ್ಮಿಗಳು ಹಣ ಎಗರಿಸಿ ಪರಾರಿಯಾಗಿದ್ದಾರೆ.

ಹಾಡಹಗಲೇ ಏಕಾಏಕಿ ಬೈಕ್‌ನಲ್ಲಿ ಬಂದ ದುರ್ಷರ್ಮಿಗಳು ಎಟಿಎಂ ವಾಹನದಲ್ಲಿದ್ದವರಿಗೆ ಖಾರದ ಪುಡಿ ಎರಚಿ ಐದು ಬಾರಿ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ವಾಹನದಲ್ಲಿದ್ದ ವ್ಯಕ್ತಿ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ. ದುಷ್ಕರ್ಮಿಗಳ ದಾಳಿಯಲ್ಲಿ ಗಿರಿ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪುತ್ತಿದ್ದಂತೆಯೇ ವಾಹನದಲ್ಲಿದ್ದ ಹಣದ ಬಾಕ್ಸ್ ಅನ್ನು ಬೈಕ್‌ನಲ್ಲಿ ಇಟ್ಟುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.  

ಸ್ಥಳೀಯರು ಕಲ್ಲು ತೂರಿ, ದುರ್ಷರ್ಮಿಗಳನ್ನು ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.ಘಟನೆಯಲ್ಲಿ ಗಾಯಗೊಂಡಿದ್ದ ಶಿವಕುಮಾರ್ (26) ಅವರನ್ನು ಚಿಕಿತ್ಸೆಗಾಗಿ ಬೀದರ್​​ನ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಅವರು ಸಹ ಅಸುನೀಗಿದ್ದಾರೆ.

ಸದ್ಯ ಆರೋಪಿಗಳಿಗಾಗಿ ಬೀದರ್ ಪೊಲೀಸರು ಬಲೆ ಬಿಸಿದ್ದಾರೆ. ಬೈಕ್ ವಾಹನದ ನಂಬರ್ ಟ್ರೇಸ್ ಮಾಡುತ್ತಿದ್ದಾರೆ. ಎಟಿಎಂ ವಾಹನದಲ್ಲಿ ಒಟ್ಟು 87 ರೂ. ಲಕ್ಷ ಹಣ ಇದ್ದ ಬಗ್ಗೆ ಮಾಹಿತಿ ದೊರೆತಿದೆ. 5 ಲಕ್ಷ ರೂ. ನಗದು ಸ್ಥಳದಲ್ಲಿಯೇ ಬಿಟ್ಟು 83 ಲಕ್ಷ ರೂ. ನಗದು ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ದೊರೆತಿದೆ.

Author:

...
Editor

ManyaSoft Admin

Ads in Post
share
No Reviews