TURUVEKERE NEWS : ಅಬ್ಬಬ್ಬಬ್ಬಾ… ಎಂತೆಂಥಾ ಪೊಲೀಸರು ಇದ್ದಾರೆ ನೋಡಿ.. ಖಾಕಿ ತೊಟ್ಟ ಪೊಲೀಸರನ್ನ ನೋಡಿದ್ರೆ ಜನರಿಗೆ ಒಂದು ರೀತಿಯ ಭಯ, ಭಕ್ತಿ ಎಲ್ಲವೂ ಇದೆ. ಅವರು ನಮ್ಮ ರಕ್ಷಕರು ಅನ್ನೋ ಭಾವನೆ ಕೂಡ ಇದೆ. ಹೀಗಾಗಿಯೇ ಪೊಲೀಸರನ್ನ ಆರಕ್ಷಕರು ಅಂತಾ ಕರೆಯೋದು. ಆದ್ರೆ ಇಲ್ಲೊಬ್ಬ ಪೊಲೀಸಪ್ಪ ಮಾಡಿರೋ ಕೆಲಸವನ್ನ ಕೇಳಿ ಎಲ್ಲರೂ SHOCK ಆಗಿದ್ದಾರೆ.
ಪೊಲೀಸರು ಕೆಲವೊಮ್ಮೆ ವಸೂಲಿಗೆ ಇಳಿಯೋದನ್ನ ನೋಡಿದ್ದೇವೆ. ಆರೋಪಿಗಳ ಬಳಿ ಹಣ ವಸೂಲಿ ಮಾಡಿ ಅವರನ್ನ ಬಿಟ್ಟುಹಾಕಿರೋ ಘಟನೆಯ ಬಗ್ಗೆಯೂ ಕೇಳಿದ್ದೇವೆ. ಹಣ, ಬಂಗಾರ ರಿಕವರಿ ಮಾಡಿಕೊಂಡಾಗ ಅದನ್ನ ಅದರ ಮಾಲೀಕರಿಗೆ ಒಪ್ಪಿಸುವಾಗ ಅವರಿಂದಲೂ ಹಣ ಪೀಕಿರೋ ಬಗ್ಗೆ ನಾವೆಲ್ಲಾ ಕೇಳಿದ್ದೇವೆ. ಆದ್ರೆ ತುಮಕೂರಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬ ಆರೋಪಿಯ ಮೊಬೈಲನ್ನ ಪಡೆದು ಕೊಂಡು, ಆತನ ಫೋನ್ಪೇಯಲ್ಲಿದ್ದ ಹಣವನ್ನ ಬಳಸಿ ಬೆಟ್ಟಿಂಗ್ ಆಡಿದ್ದಾನೆ. ಆರೋಪಿಯ PHONE PAY ಯಿಂದ ಬರೋಬ್ಬರಿ 95 ಸಾವಿರ ರೂಪಾಯಿ ಬೆಟ್ಟಿಂಗ್ ಆಡಿರುವ ಸಬ್ ಇನ್ಸ್ಪೆಕ್ಟರ್ ಇದೀಗ SUSPEND ಆಗಿದ್ದಾನೆ.
ತುರುವೇಕೆರೆ ಪೊಲೀಸ್ ಠಾಣೆಯ Sub-Inspector ಸಂಗಪ್ಪ ಮೇಟಿಯನ್ನ[Sangappa Matey] ಕರ್ತವ್ಯ ಲೋಪದ ಆರೋಪದ ಮೇಲೆ ತುಮಕೂರು ಎಸ್ಪಿ ಅಶೋಕ್ ವೆಂಕಟ್ ಅಮಾನತುಗೊಳಿಸಿ [Suspension] ಆದೇಶ ಹೊರಡಿಸಿದ್ದಾರೆ. ಕೇಸ್ ಒಂದರಲ್ಲಿ ಬಂಧಿತನಾಗಿದ್ದ ಆರೋಪಿಯ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದ ಸಬ್ ಇನ್ಸ್ಪೆಕ್ಟರ್ ಸಂಗಪ್ಪ ಮೇಟಿ, ಅದರಲ್ಲಿನ ಫೋನ್ಪೇ ಪಾಸ್ವರ್ಡ್ ಕೂಡ ಪಡೆದುಕೊಂಡಿದ್ದ. ಬಳಿಕ ಆರೋಪಿಯನ್ನ ಜೈಲಿಗೆ ಕಳುಹಿಸಿದ ಬಳಿಕ ಆತನ ಫೋನ್ಫೇ ಅಕೌಂಟ್ನಲ್ಲಿದ್ದ 95 ಸಾವಿರ ರೂಪಾಯಿಯನ್ನ ತೆಗೆದುಕೊಂಡು BETTING ಆಡಿದ್ದ ಎನ್ನಲಾಗಿದೆ.
ಈ ಬಗ್ಗೆ ದೂರು ದಾಖಲಾಗಿ ಪ್ರಕರಣದ ತನಿಖೆ ಕೂಡ ನಡೆದು ಆರೋಪ ಸಾಬೀತಾದ ಹಿನ್ನೆಲೆ ಸಬ್ ಇನ್ಸ್ಪೆಕ್ಟರ್ ಸಂಗಪ್ಪ ಮೇಟಿಯನ್ನು ಎಸ್ಪಿ ಕೆ.ವಿ.ಅಶೋಕ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಘಟನೆಯು ತುಮಕೂರು ಜಿಲ್ಲೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆಯೂ ಪ್ರಶ್ನೆಗಳು ಏಳುವಂತೆ ಮಾಡಿದೆ.