ಕೊರಟಗೆರೆ:
ರಾಜ್ಯಾದ್ಯಂತ ನಿನ್ನೆಯಿಂದ SSLC ಪರೀಕ್ಷೆ ಆರಂಭವಾಗಿದ್ದು, ನಿನ್ನೆ ಕನ್ನಡ ಪರೀಕ್ಷೆ ನಡೆದಿದೆ. ಆದ್ರೆ ಕೊರಟಗೆರೆ ತಾಲೂಕಿನಾದ್ಯಂತ ಕನ್ನಡ ಪರೀಕ್ಷೆಗೆ ಬರೋಬ್ಬರಿ 56 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಹೌದು ಕೊರಟಗೆರೆ ಪಟ್ಟಣದ ಜೂನಿಯರ್ ಕಾಲೇಜು, ಪ್ರೌಢ ಶಾಲೆ, ತುಂಬಾಡಿಯ ಶಿವಾನಂದ ಪ್ರೌಢ ಶಾಲೆ, ತೋವಿನಕೆರೆಯ ಜ್ಯೋತಿ ಗ್ರಾಮಾಂತರ ಪ್ರೌಢ ಶಾಲೆ, ಇರಕಸಂದ್ರ ಕಾಲೋನಿಯ KPS ಶಾಲೆ, ಬಸವೇಶ್ವರ ಕೇಂದ್ರೀಯ ಕಾಲೇಜು, ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹೊಳವನಹಳ್ಳಿ KPS ಮತ್ತು ಅಕ್ಕಿರಾಂಪುರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ SSLC ಪರೀಕ್ಷೆ ನಡೆಯುತ್ತಿದ್ದು, ಕೊರಟಗೆರೆ ತಾಲೂಕಿನಾದ್ಯಂತ ಪ್ರಥಮ ಭಾಷೆ ಕನ್ನಡ ಎಕ್ಸಾಂಗೆ 56 ಮಂದಿ ವಿದ್ಯಾರ್ಥಿಗಳು ಹಾಜರಾಗಿಲ್ಲ ಎಂಬ ಮಾಹಿತಿ ಸಿಕ್ಕಿದೆ.
ಇನ್ನು ಕೊರಟಗೆರೆ ತಾಲೂಕಿನಾದ್ಯಂತ 9 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಸುಮಾರು 2 ಸಾವಿರದ ನೂರಾ ತೊಂಬತ್ತೇಳು ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಅದ್ರಲ್ಲಿ 56 ಮಂದಿ ಕನ್ನಡ ಪರೀಕ್ಷೆಯನ್ನು ಬರೆದಿಲ್ಲ. ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿರೋದ್ರ ಬಗ್ಗೆ ಕೊರಟಗೆರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ ಪರೀಕ್ಷೆಗೆ ಗೈರಾಗಿರೋ ಖಾಸಗಿ ಅಭ್ಯರ್ಥಿಗಳೆಷ್ಟು, ರೀಪಿಟರ್ಸ್ ಎಷ್ಟು ಮತ್ತು ಪ್ರಸ್ತುತ ಶಾಲೆಗೆ ಬಂದು ನೊಂದಣಿ ಕಾರ್ಡು ಪಡೆದು ಪರೀಕ್ಷೆಗೆ ಎಷ್ಟು ಜನ ಬಂದಿಲ್ಲ, ಪರೀಕ್ಷೆಗೆ ಹಾಜರಾಗದೇ ಇರಲು ಕಾರಣ ಏನು ಎಂಬುದೇ ಶಿಕ್ಷಣ ಇಲಾಖೆಗೆ ಗೊತ್ತಿಲ್ವಂತೆ.
ಇನ್ನಾದ್ರು ಕನ್ನಡ ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಶಿಕ್ಷಣ ಇಲಾಖೆ ಕಲೆ ಹಾಕಿ, ಸೋಮವಾರ ನಡೆಯುವ ಗಣಿತ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಕರೆತುರುತ್ತಾರಾ…? ಅಥವಾ ಗೈರಾದವರಿಗೂ ನಮಗೂ ಸಂಬಂಧ ಇಲ್ಲ ಎಂಬಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸುಮ್ಮನೆ ಆಗ್ತಾರಾ ಎಂದು ಕಾದುನೋಡಬೇಕಿದೆ.