ಬೆಂಗಳೂರು : ನಾಳೆಯಿಂದ ಗ್ರೇಟರ್‌ ಬೆಂಗಳೂರು ಆಗಲಿದೆ ಬಿಬಿಎಂಪಿ

ಬೆಂಗಳೂರು :

ಸಿಲಿಕಾನ್‌ ಸಿಟಿ ಬೆಂಗಳೂರಿನ ಆಡಳಿತದ ಜವಾಬ್ದಾರಿ ಹೊತ್ತಿದ್ದ ಬಿಬಿಎಂಪಿ ಹೆಸರು ಇನ್ಮುಂದೆ ಇತಿಹಾಸದ ಪುಟ ಸೇರಲಿದೆ. ನಾಳೆಯಿಂದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ “ಗ್ರೇಟರ್‌ ಬೆಂಗಳೂರು ಪ್ರಾಧಿಕಾರ “ ವಾಗಿ ಬದಲಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಇಂದು ಅಧಿಕೃತ ಸೂಚನೆ ಹೊರಡಿಸಿದೆ.

ಇನ್ನು ಈ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದು, ಬೆಂಗಳೂರು ನಗರಾಭಿವೃದ್ದಿ ಸಚಿವರು ಉಪಾಧ್ಯಕ್ಷರಾಗಿದ್ದಾರೆ. ಅಲ್ದೇ ಸುಗಮ ಆಡಳಿತ ತರುವ ದೃಷ್ಟಿಯಿಂದ 7 ಪಾಲಿಕೆಗಳ ರಚನೆ ಮಾಡಲು ಈಗಾಗಲೇ ಪ್ರಸ್ತಾಪಿಸಲಾಗಿದೆ. ಇದ್ರ ಬಗ್ಗೆ ನಿಯಮಾವಳಿ ರೂಪಿಸಿದ ಬಳಿಕವಷ್ಟೇ ಸೂಕ್ತ ಮಾಹಿತಿ ತಿಳಿಯಲಿದೆ. ಇನ್ನು ಗ್ರೇಟರ್‌ ಬೆಂಗಳೂರು ಜೊತೆಗೆ ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ಜಿಬಿಎ ಮುಖ್ಯ ಆಯುಕ್ತರು ಅಂತ ನಾಮ ಬದಲಾವಣೆ ಮಾಡಲಾಗಿದ್ದು, ಹೊಸ ಆಡಳಿತಾಧಿಕಾರಿಯನ್ನೂ ನೇಮಕ ಮಾಡಲಾಗುತ್ತದೆ.

ಸದ್ಯಕ್ಕೆ ಬಿಬಿಎಂಪಿಯನ್ನು 3 ಪಾಲಿಕೆಗಳನ್ನಾಗಿ ವಿಂಗಡಣೆ ಮಾಡಲಾಗುತ್ತಿದ್ದು, ಒಂದೊಂದು ಪಾಲಿಕೆಯು 125 ವಾರ್ಡ್‌ಗಳನ್ನು ಹೊಂದಿರುತ್ತೆ ಎಂದು ಹೇಳಲಾಗುತ್ತಿದೆ.

Author:

...
Sushmitha N

Copy Editor

prajashakthi tv

share
No Reviews