ಬೆಳಗಾವಿ : ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ

ಬೆಳಗಾವಿ: 

ಬೆಳಗಾವಿಯಲ್ಲಿ ಸಂಭವಿಸಿದ ಅಪಘಾತದಿಂದ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, 5ನೇ ತಿಂಗಳಿನ ಹಣ ಇನ್ನೂ ಕೆಲ ಜಿಲ್ಲೆಗಳಲ್ಲಿ ಬಂದಿಲ್ಲ. ಹಾಗೂ 16 ಹಾಗೂ 17 ನೇ ಕಂತಿನ ಹಣ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ಕಡೆಯಿಂದ ಹಣ ಮಂಜೂರಾಗಿದ್ದು, ಹಂತ ಹಂತವಾಗಿ ಎಲ್ಲಾ ಮಹಿಳೆಯರಿಗೆ ಪೆಂಡಿಂಗ್ ಹಣ ಜಮೆ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಬೆಳಗಾವಿಯ ಗೃಹಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಹಿಂದಿನ ಮಾದರಿಯಂತೆ ಜಿಲ್ಲಾ ಉಪ ನಿರ್ದೇಶಕರ ಮೂಲಕವೇ ಗೃಹಲಕ್ಷ್ಮೀ ಯೋಜನೆ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ಈಗಾಗಲೇ ತಾಲೂಕು ಪಂಚಾಯತ್‌ ಮುಖಾಂತರ ಹಾಕೋದ್ರಿಂದ ಸ್ವಲ್ಪ ನಿಧಾನವಾಗಿದೆ. ಹಿಂದೆ ಹಾಕುತ್ತಿದ್ದ ವಿಧಾನದ ಮೂಲಕವೇ ಹಣ ಹಾಕುತ್ತೇವೆ. ಹೊಸ ಪ್ರೊಸೀಜರ್‌ ಮೂಲಕ ತಾಲೂಕು ಪಂಚಾಯತಿಗೆ ಹೋಗಿ ನಂತರ ನಮ್ಮ ಇಲಾಖೆಗೆ ಹಣ ಬರುತ್ತದೆ. ಈಗಾಗಲೇ ನಮಗೆ ದುಡ್ಡು ಬಂದು ೧೫ ದಿನವಾಗಿದೆ. ಆದರೆ ತಾಲೂಕು ಪಂಚಾಯಿತಿಯಿಂದ ನಮಗೆ ಬರೋದಕ್ಕೆ ಸ್ವಲ್ಪ ತಡವಾಗಿದೆ. ಮುಂದಿನ ತಿಂಗಳು ಎಲ್ಲಾ ಮತ್ತೆ ಸರಿ ಹೋಗುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ.

ಮೈಕ್ರೋ ಫೈನಾನ್ಸ್‌ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಚಿವೆ ಆರು ತಿಂಗಳ ಹಿಂದೆಯೇ ಮೈಕ್ರೋ ಫೈನಾನ್ಸ್‌ ಬಗ್ಗೆ ಈ ರೀತಿ ಆಗುತ್ತೆ ಎಂಬ ಕಲ್ಪನೆ ನನಗೆ ಇತ್ತು. ಯಾಕೆಂದರೆ ನಮ್ಮ ಕ್ಷೇತ್ರದ ಬಹಳಷ್ಟು ಜನ ಇದರ ಬಗ್ಗೆ ನನಗೆ ದೂರು ನೀಡಿದ್ದರು. ಹಾಗಾಗಿ ಈ ಪೈನಾನ್ಸ್‌ನ ವಿಚಾರವಾಗಿ ನಾನು ತಕ್ಷಣವೇ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದೆ, ಇನ್ನೊಮ್ಮೆ ನನ್ನ ಕ್ಷೇತ್ರದಲ್ಲಿ ಈ ರೀತಿ ಕಿರುಕುಳ ನೀಡಿದರೆ ನಿಮ್ಮನ್ನು ಸುಮ್ಮನೆ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದರು.

 

Author:

...
Editor

ManyaSoft Admin

Ads in Post
share
No Reviews