Beauty Tips:
ಸೌಂದರ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸಲು ಪ್ರತಿಯೊಬ್ಬರೂ ತಮ್ಮ ದಿನಚರಿಯಲ್ಲಿ ಪ್ರಯತ್ನಿಸಲೇ ಬೇಕಾದ ಆಯುರ್ವೇದ ಟಿಪ್ಸ್ ಇಲ್ಲಿದೆ. ಇವು ನಿಮ್ಮ ಸೌಂದರ್ಯವನ್ನು ಮತ್ತು ಆರೋಗ್ಯವನ್ನು ಉತ್ತಮವಾಗಿಸಲು ಸಹಾಯಮಾಡುತ್ತದೆ.
ಹರ್ಬಲ್ ಮಾಸ್ಕ್:
ಅರಿಶಿನ, ಚಂದನ, ಬೇವು, ರೋಸ್ ವಾಟರ್ ಅಥವಾ ಜೇನುತುಪ್ಪ ಸೇರಿಸಿ ಫೇಸ್‌ಪ್ಯಾಕ್ ತಯಾರಿಸಿ. ಈ ವಸ್ತುಗಳಲ್ಲಿ ಆಂಟಿಬ್ಯಾಕ್ಟೀರಿಯಾ, ಆಂಟಿ ಸೆಪ್ಟಿಕ್ ಗುಣಗಳಿವೆ. ಇದು ನಿಮ್ಮ ಚರ್ಮದ ಬಣ್ಣವನ್ನು ಉತ್ತಮವಾಗಿಸಲು ಸಹಾಯ ಮಾಡುತ್ತದೆ.
ಉಸಿರಾಟದ ವ್ಯಾಯಾಮಗಳನ್ನು ಮಾಡುವುದು:
ದೈಹಿಕ ಒತ್ತಡಕ್ಕಿಂತ ಮಾನಸಿಕ ಒತ್ತಡವು ಚರ್ಮದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮಬೀರುತ್ತದೆ. ಉಸಿರಾಟದ ವ್ಯಾಯಾಮಗಳು ಒತ್ತಡವನ್ನು ತೊಡೆದುಹಾಕಲು ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಉತ್ತಮ ಮಾರ್ಗವಾಗಿದೆ.
ನೀವು ಮಲಗುವ ಮೊದಲು, ಸರಳ ಉಸಿರಾಟದ ವ್ಯಾಯಾಮ ಮಾಡಿ. ನೀವು ಮಲಗುವ ಮೊದಲು ಅಥವಾ ದಿನದ ಯಾವುದೇ ಸಮಯದಲ್ಲಿ 5 ರಿಂದ 20 ನಿಮಿಷಗಳ ಕಾಲ ಇದನ್ನು ಅಭ್ಯಾಸ ಮಾಡಿ.
ಹಸಿ ಹಾಲನ್ನು ಹಚ್ಚುವುದು:
ಹಸಿ ಹಾಲು ಹಚ್ಚುವುದರಿಂದ ಚರ್ಮವು ನೈಸರ್ಗಿಕ ಹೊಳಪು ಪಡೆಯಬಹುದು. ವಿಟಮಿನ್, ಖನಿಜಾಂಶ, ಪ್ರೋಟಿನ್ ಮತ್ತು ಕಾರ್ಬೋಹೈಡ್ರೇಟ್ಸ್ ಗಳಿಂದ ಸಮೃದ್ಧವಾಗಿರುವ ಹಾಲು ಚರ್ಮದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ ಚರ್ಮದ ತೇವಾಂಶವನ್ನು ಕಾಪಾಡುವುದರಿಂದ ಉತ್ತಮ ಹೊಳಪು ಪಡೆಯಲು ಸಾಧ್ಯವಾಗುತ್ತದೆ.