ಚರ್ಮದ ಅಂದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲಿಗೆ ಟೊಮ್ಯಾಟೋವನ್ನು ಬಳಸಿ ಮನೆಯಲ್ಲೇ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಟೊಮ್ಯಾಟೋದಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಚರ್ಮದ ಟೋನ್ ಸುಧಾರಿಸಲು ಟೊಮ್ಯಾಟೋ ಬಹಳ ಉತ್ತಮವಾಗಿದೆ. ಟೊಮ್ಯಾಟೋ ಫೇಶಿಯಲ್ ಮಾಡಲು ಈ ವಿಧಾನವನ್ನು ಅನುಸರಿಸಿ
ಮುಖವನ್ನು ಕ್ಲೆನ್ಸರ್ ಮಾಡಿ : ಟೊಮ್ಯಾಟೋ ಫೇಶಿಯಲ್ ಅನ್ನು ಕ್ಲೆನ್ಸರ್ ನಿಂದ ಆರಂಭಿಸಬೇಕು. ನಿಮ್ಮ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ನಂತರ ಒಂದು ಬಟ್ಟಲಿನಲ್ಲಿ 2 ಚಮಚ ಟೊಮ್ಯಾಟೋ ಪೇಸ್ಟ್ ಮತ್ತು 2 ಚಮಚ ಹಸಿ ಹಾಲನ್ನು ಸೇರಿಸಿ ಮಿಶ್ರಣ ಮಾಡಿ ನಂತರ ಈ ಕ್ಲೆನ್ಸರ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 5 ರಿಂದ 10 ನಿಮಿಷಗಳ ಕಾಲ ಹಾಗೆ ಇರಿಸಿ ನಂತರ ತೊಳೆಯಿರಿ.
ಮುಖವನ್ನು ಸ್ಕ್ರಬ್ ಮಾಡಿ : ಟೊಮ್ಯಾಟೋ ಸ್ಕ್ರಬ್ ತಯಾರಿಸಲು ಒಂದು ಬಟ್ಟಲಿನಲ್ಲಿ 2 ಚಮಚ ಸಕ್ಕರೆ ಹಾಗೂ 1 ಚಮಚ ಟೊಮ್ಯಾಟೋ ಪೇಸ್ಟ್ ಮತ್ತು ಸ್ವಲ್ಪ ಜೇನುತುಪ್ಪ ವನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮತ್ತು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಚೆನ್ನಾಗಿ ಮಸಾಜ್ ಮಾಡಿ, 10 ನಿಮಿಷಗಳ ಕಾಲ ಹಾಗೆ ಇರಿಸಿ ಆನಂತರ ಮುಖ ತೊಳೆಯಿರಿ.
ಟೊಮ್ಯಾಟೋ ಫೇಸ್ ಪ್ಯಾಕ್ : ಕೊನೆಯ ಹಂತ ಟೊಮ್ಯಾಟೋ ಫೇಸ್ ಪ್ಯಾಕ್ ಹಚ್ಚುವುದು. ಈ ಫೇಸ್ ಪ್ಯಾಕ್ ತಯಾರಿಸಲು 1 ಚಮಚ ಕಡಲೇಹಿಟ್ಟು, 1 ಚಮಚ ಮೊಸರು ಮತ್ತು ನಿಂಬೆ ರಸ, ಮತ್ತು 2 ಚಮಚ ಟೊಮ್ಯಾಟೋ ಪೇಸ್ಟ್, ಹರಿಶಿನ ಸೇರಿಸಿ ಮಿಶ್ರಣ ಮಾಡಿ ಒಂದು ಬಟ್ಟಲಿನಲ್ಲಿ, ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ. 15 ನಿಮಿಷಗಳ ಕಾಲ ಹಾಗೆ ಇರಿಸಿ, ತಣ್ಣೀರಿನಿಂದ ಮುಖವನ್ನು ತೊಳೆಯಿರಿ.