BEAUTY TIPS- ದಾಳಿಂಬೆ ಹಣ್ಣಿನಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

ದಾಳಿಂಬೆ, ಹಣ್ಣುಗಳ ಸ್ವರ್ಗ ಅಂತಲೇ ಅದನ್ನು ಕರೆಯುತ್ತಾರೆ. ಚೆಲುವೆಯರ ನಗೆಗೆ ಆ ದಾಳಿಂಬೆ ಹಣ್ಣಿನ ಕಾಳುಗಳನ್ನು ಹೋಲಿಸುತ್ತಾರೆ. ದಾಳಿಂಬೆ ಹಣ್ಣು, ಸೇಬುವಿನ ಹಾಗೆಯೇ ಎಲ್ಲರಿಗೂ ಪ್ರಿಯವಾದ ಹಣ್ಣು. ಈ ಹಣ್ಣು ಆರೋಗ್ಯ ದೃಷ್ಟಿಯಿಂದಲೂ ಕೂಡ ಅಷ್ಟೇ ಮಹತ್ವ ಪಡೆದುಕೊಂಡಿದೆ. ಈ ಹಣ್ಣಿನೊಳಗಡೆ ಅಡಗಿರುವ ಒಂದೊಂದು ಕೆಂಪು ಮುತ್ತುಗಳು ಆರೋಗ್ಯಕ್ಕೆ ಹಲವು ಕೊಡುಗೆಗಳನ್ನು ನೀಡುತ್ತವೆ. ಇದನ್ನು ಬೆರಿಽ ಹಣ್ಣಿನ ಜೊತೆ ಕೂಡ ಹೋಲಿಕೆ ಮಾಡುತ್ತಾರೆ. ಪ್ರೀತಿಯಿಂದ ತಿನ್ನುವ ಈ ಬೀಜಗಳನ್ನು ಪಾಕಶಾಲೆಯಲ್ಲಿ ಅನೇಕ ಖಾದ್ಯಗಳ ತಯಾರಿಕೆಗೆ ಬಳಸುತ್ತಾರೆ.ಪ್ರತಿದಿನ ಒಂದು ಬಟ್ಟಲು ದಾಳಿಂಬೆಯನ್ನು ತಿನ್ನುವುದರಿಂದ ರೋಗಗಳ ವಿರುದ್ಧ ಹೋರಾಡಲು ದೇಹದ ರಕ್ಷಣೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮನ್ನು ಸದೃಢವಾಗಿ ಇರಿಸುತ್ತದೆ.

ಪ್ರತಿದಿನ ದಾಳಿಂಬೆ ತಿನ್ನುವುದರಿಂದ ಸಿಗುವ ಪ್ರಯೋಜನಗಳು

*ರಕ್ತದೊತ್ತಡ ನಿರ್ವಹಣೆ

ಏರಿಳಿತದ ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡವನ್ನು ನೀವು ಎದುರಿಸುತ್ತಿದ್ದರೆ, ದಾಳಿಂಬೆ ಈ ಸಮಸ್ಯೆ ಪರಿಹರಿಸಲು ಸಹಾಯ ಮಾಡುತ್ತದೆ. ದಾಳಿಂಬೆ ರಸವು ಸಂಕೋಚನದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಹೀಗಾಗಿ ರಕ್ತದೊತ್ತಡ ಇರುವವರಿಗೆ ಇದು ಉತ್ತಮ ಆಹಾರವಾಗಿದೆ.

*ಸೋಂಕಿನ ವಿರುದ್ಧ ಹೋರಾಡುತ್ತದೆ

ಇಮ್ಯುನಿಟಿ ಪವರ್‌ ಕಡಿಮೆ ಇದ್ರೆ ಇಲ್ಲಾ ಈಗಷ್ಟೇ ರೋಗದಿಂದ ಚೇತರಿಸಿಕೊಳ್ಳುತ್ತಿದ್ದೇನೆ ಎನ್ನುವವರು ದಾಳಿಂಬೆ ಸೇವಿಸಲು ಮರೆಯಬೇಡಿ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆ್ಯಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಸೋಂಕನ್ನು ನಿವಾರಿಸುತ್ತದೆ.

*ವ್ಯಾಯಾಮ ಮಾಡುವವರಿಗೆ ಮತ್ತಷ್ಟು ಶಕ್ತಿ
ನಿತ್ಯ ಒಂದು ಬಟ್ಟಲು ದಾಳಿಂಬೆ ಹಣ್ಣಿನ ಕಾಳುಗಳನ್ನು ತಿನ್ನವುದರಿಂದ ಅನೇಕ ಲಾಭಗಳಲ್ಲಿ ಮತ್ತೊಂದು ಲಾಭ ಎಂದರೆ, ನಿತ್ಯ ಕಸರತ್ತು ಮಾಡುವವರಿಗೆ ಇದು ಬಹಳ ಸಹಾಯಕಾರಿ. ಈ ಹಣ್ಣು ತಿನ್ನುವುದರಿಂದ ದೇಹದಲ್ಲಿ ರಕ್ತ ಪೂರೈಕೆ ಸರಳವಾಗುತ್ತದೆ. ವ್ಯಾಯಾಮ ಮಾಡುವವರ ಸ್ನಾಯುಗಳಿಗೆ ಹೆಚ್ಚು ಹೆಚ್ಚು ರಕ್ತ ಪೂರೈಸುವಲ್ಲಿ ಈ ಹಣ್ಣು ಸಹಾಯಕಾರಿ ಹೀಗಾಗಿ ಈ ಹಣ್ಣನ್ನು ಹೆಚ್ಚು ಹೆಚ್ಚು ಜಿಮ್​ಗೆ ಹೋಗುವವರು ಸೇವಿಸುವುದು ಒಳ್ಳೆಯದು. ಈ ಹಣ್ಣಿನಲ್ಲಿ ಪೌಷ್ಠಿಕಾಂಶದ ಜೊತೆಗೆ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ಸ್​ಗಳು ಇವೆ. ಇವು ನಿಮ್ಮ ಸ್ನಾಯುಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವಲ್ಲಿ ಸಹಾಯಕಾರಿ.

*ಕ್ಯಾನ್ಸರ್ ತಡೆಗಟ್ಟವುದು

ದಾಳಿಂಬೆ ಹಣ್ಣಿನಲ್ಲಿ ಪಾಲಿಫೆನಿಲ್ಸ್ ಎನ್ನುವ ಅಂಶವಿದೆ ಇದರಿಂದ ದೇಹದಲ್ಲಿ ಆ್ಯಂಟಿಆಕ್ಸಿಡಂಟ್, ಆ್ಯಂಟಿ ಇನ್​ಫ್ಲೆಮೆಟರಿ ಆ್ಯಂಟಿ ಕಾರ್ಗಿನಾಜಿಕ್​ನಂತಹ ಪರಿಣಾಮ ಬೀರುತ್ತದೆ. ಇವು ಲಂಗ್ಸ್​​ ಕ್ಯಾನ್ಸರ್​ನಂತಹ ಕಾಯಿಲೆಗಳು ಬರದಂತೆ ತಡೆಗಟ್ಟುತ್ತವೆ. ಬ್ರೀಸ್ಟ್​ ಕ್ಯಾನ್ಸರ್​ಗಳ ವಿರುದ್ಧ ಕೆಮೊ ಪ್ರಿವೆಂಟ್ ಪ್ರಾಪರ್ಟಿಸ್​ಗಳನ್ನು ಇವು ಬೆಳೆಸುತ್ತವೆ.

 

Author:

...
Editor

ManyaSoft Admin

Ads in Post
share
No Reviews