Beauty Tips : ರೋಸ್ಮೆರಿ ನಿಮ್ಮ ಕೂದಲಿಗೆ ಎಷ್ಟು ಉಪಯೋಗ ಗೋತ್ತಾ....!

Beauty Tips :

ರೋಸ್ಮೆರಿ ನೀರನ್ನು ಕೂದಲಿಗೆ ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನು ಬಳಸೋದ್ರಿಂದ ಕೂದಲಿಗೆ ಅನೇಕ ಉಪಯೋಗಗಳಿವೆ. ಇದು ನೈಸರ್ಗಿಕ, ರಾಸಾಯನಿಕ ಮುಕ್ತ ಚಿಕಿತ್ಸೆ ಆಗಿದ್ದು, ನಿಯಮಿತವಾಗಿ ಬಳಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಇದನ್ನು ಉಪಯೋಗಿಸುವ ವಿಧಾನವನ್ನು ನೋಡೋದಾದ್ರೆ....

ರೋಸ್ಮೆರಿ ನೀರನ್ನು ತಯಾರಿಸಲು ಬೇಕಾಗುವ ಪದಾರ್ಥಗಳು:

  • ರೋಸ್ಮೆರಿ ಎಲೆಗಳು – 1 ಕಪ್ (ಹೆಚ್ಚಾಗಿ ತಾಜಾ ಎಲೆಗಳು)
  • ನೀರು – 2 ಕಪ್

ತಯಾರಿಸುವ ವಿಧಾನ:

  1. ಒಂದು ಬಾಣಲೆಯಲ್ಲಿ 2 ಕಪ್ ನೀರು ಹಚ್ಚಿ.
  2. ಅದಕ್ಕೆ 1 ಕಪ್ ತಾಜಾ ರೋಸ್ಮೆರಿ ಎಲೆಗಳನ್ನು ಸೇರಿಸಿ.
  3. ನೀರು ಚೆನ್ನಾಗಿ ಕುದಿಯುವವರೆಗೆ (10–15 ನಿಮಿಷ) ಕಾದು ಹತ್ತಿಸಿ.
  4. ತಂಪಾಗಲು ಬಿಡಿ.
  5. ನಂತರ ಚನ್ನಾಗಿ strain ಮಾಡಿ ಗಾಜಿನ ಬಾಟಲಿಯಲ್ಲಿ ಹಾಕಿ.
  6. ಫ್ರಿಡ್ಜಿನಲ್ಲಿ 5–7 ದಿನ ಉಳಿಸಬಹುದು.

ರೋಸ್ಮೆರಿಯನ್ನು ಬಳಸುವ ವಿಧಾನ:

  • ಶಾಂಪೂ ಮಾಡಿ ತಲೆಯ ತೊಳೆಯಿದ ನಂತರ, ಈ ರೋಸ್ಮೆರಿ ನೀರನ್ನು ತಲೆಯಲ್ಲಿ ಚೆನ್ನಾಗಿ ಹಚ್ಚಿ.
  • ಬೆರಳರಳುಗಳಿಂದ ಸೌಮ್ಯವಾಗಿ ಮಸಾಜ್ ಮಾಡಿ.
  • 30 ನಿಮಿಷ ಅಥವಾ ಹೆಚ್ಚು ಇರಿಸಬಹುದು. ತೊಳೆಯುವ ಅವಶ್ಯಕತೆ ಇಲ್ಲ.
  • ವಾರದಲ್ಲಿ 2–3 ಬಾರಿ ಬಳಸಬಹುದು.

ರೋಸ್ಮೆರಿಯಿಂದಾಗುವ ಉಪಯೋಗಗಳು :

  1. ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ.
  2. ಕೂದಲು ಬೆಳೆದಂತೆ ಉತ್ಸಾಹ ನೀಡುತ್ತದೆ.
  3. ತಲೆಯ ಚರ್ಮದ ರಕ್ತ ಸಂಚಾರ ಹೆಚ್ಚಿಸುತ್ತೆ.
  4. ಡ್ಯಾಂಡ್ರಫ್ ತಡೆಗಟ್ಟಲು ಸಹಾಯ ಮಾಡುತ್ತದೆ.
  5. ಕೂದಲು ಹಿಗ್ಗಿದಂತೆ (shiny) ಆಗುತ್ತದೆ.

 

Author:

...
Sushmitha N

Copy Editor

prajashakthi tv

share
No Reviews