BCCI :ಟೀಮ್ ಇಂಡಿಯಾ ಆಟಗಾರರ ಪತ್ನಿಯರ ಪ್ರವಾಸದ ಅವಧಿ ಕಡಿತ..!

ಟೀಮ್ ಇಂಡಿಯಾ
ಟೀಮ್ ಇಂಡಿಯಾ
ಕ್ರಿಕೆಟ್‌

ಭಾರತ ತಂಡವು ಕಳಪೆ ಪ್ರದರ್ಶನ ನೀಡಿ ಬ್ಯಾಕ್ ಟು ಬ್ಯಾಕ್ ಟೆಸ್ಟ್ ಸರಣಿಗಳನ್ನು ಸೋತ  ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಅವರಿಗೆ ನೀಡಿದ್ದ ವಿಶೇಷ ಸವಲತ್ತುಗಳನ್ನು ಕೊನೆಗೊಳಿಸಲು ತೀರ್ಮಾನಿಸಿದೆ.

ತವರಿನಲ್ಲಿ ನ್ಯೂಝಿಲೆಂಡ್ ವಿರುದ್ಧ 3-0 ಅಂತರದಿಂದ ಹೀನಾಯ ಸೋಲನ್ನು ಅನುಭವಿಸಿದ್ದ ಟೀಮ್ ಇಂಡಿಯಾ, ಬಳಿಕ ಆಸ್ಟ್ರೇಲಿಯಾದಲ್ಲೂ ಟೆಸ್ಟ್ ಸರಣಿಗಳನ್ನು ಸೋತಿದೆ. ಸೋಲುಗಳ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ ಈ ಹಿಂದೆ ಇದ್ದ ಕೆಲವು ಕಠಿಣ ನಿಯಮಗಳನ್ನು ಜಾರಿ ತರಲು ತೀರ್ಮಾನಿಸಿದೆ.ಆಟಗಾರರು 45 ದಿನಗಳ ಸರಣಿಯಾಗಿದ್ದರೆ ಎರಡು ವಾರಗಳ ಕಾಲ ಪತ್ನಿಯರು/ಕುಟುಂಬಸ್ಥರ ಜೊತೆಯಾಗಿರಬೇಕು  ಹಾಗೂ ಅಲ್ಪಾವಧಿ ಸರಣಿಯಾದರೆ 7 ದಿನಗಳ ಕಾಲ ಜೊತೆಯಾಗಿರಬೇಕೆಂದು ಬಿಸಿಸಿಐ ತೀರ್ಮಾನಿಸಿದೆ.

ಟೀಮ್ ಇಂಡಿಯಾ ಆಟಗಾರರು ಒಂದೇ ಬಸ್ನಲ್ಲಿ ಪ್ರಯಾಣಿಸಬೇಕೆಂಬ ನಿಯಮವನ್ನು ಸಹ ಜಾರಿಗೊಳಿಸಲಾಗುತ್ತಿದೆ. ಹಿಂದೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕೆಲ ಸ್ಟಾರ್ ಆಟಗಾರರಿಗೆ ವಿಶೇಷ ಸವಲತ್ತುಗಳನ್ನು ಕಲ್ಪಿಸಲಾಗಿತ್ತು.ಆದರೆ ಈಗ ಪ್ರತಿಯೊಬ್ಬ ಆಟಗಾರನು ತಂಡದ ಬಸ್ನಲ್ಲೇ ಪ್ರಯಾಣಿಸಬೇಕೆಂದು ಹಾಗೂ ಪ್ರತ್ಯೇಕ ಪ್ರಯಾಣವನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದೆ. ಮೂಲಕ ಟೀಮ್ ಇಂಡಿಯಾ ಆಟಗಾರರನ್ನು ಹದ್ದುಬಸ್ತಿನಲ್ಲಿಡಲು ಬಿಸಿಸಿಐ ತೀರ್ಮಾನಿಸಿ ಜಾರಿ ತರಲು ಮುಂದಾಗಿದೆ .

Author:

...
Editor

ManyaSoft Admin

Ads in Post
share
No Reviews