Bangalore : ಮುಡಾ ಹಗರಣದಲ್ಲಿ ಮತ್ತೆ 92 ಸೈಟ್‌ಗಳ ಜಪ್ತಿ ...!

BANGALORE : ರಾಜ್ಯ ರಾಜಕೀಯದಲ್ಲೇ ಸಂಚಲನ ಮೂಡಿಸಿದ್ದ ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ED (ಜಾರಿ ನಿರ್ದೇಶನಾಲಯ) ಮಹತ್ವದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಮುಡಾ ಹಗರಣದಲ್ಲಿ ED ಮತ್ತೆ 92 ಸೈಟ್‌ಗಳನ್ನು ಜಪ್ತಿ ಮಾಡಿದ್ದು, ಈ ಸೈಟ್‌ಗಳ ಮೌಲ್ಯವೇ ಬರೋಬ್ಬರಿ 100 ಕೋಟಿ ರೂಪಾಯಿ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಟ್ವೀಟ್‌ ಮಾಡುವ ಮೂಲಕ ತಿಳಿಸಿದೆ.

ಬೆಂಗಳೂರು ಕಚೇರಿಯಿಂದ ಈ ಬಗ್ಗೆ ED ಟ್ವೀಟ್ ಮಾಡಿ, ಅಧಿಕೃತ ಮಾಹಿತಿ ನೀಡಿದೆ. PMLA (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002) ಕಾಯಿದೆಯಡಿ ಸಿಎಂ ಸಿದ್ದರಾಮಯ್ಯ ಹಾಗೂ ಇತರರಿಗೆ ಸೇರಿದ 92 ಸೈಟ್‌ಗಳನ್ನು ಜಪ್ತಿ ಮಾಡಲಾಗಿದೆ.

ಈ ಮೊದಲು ಮುಡಾ ಹಗರಣದಲ್ಲಿ ಇ.ಡಿ 162 ಸೈಟ್‌ಗಳನ್ನು ಜಪ್ತಿ ಮಾಡಿತ್ತು. 162 ಸೈಟ್‌ಗಳ ಮಾರುಕಟ್ಟೆ ಮೌಲ್ಯ 300 ಕೋಟಿ ರೂಪಾಯಿ. ಈಗ 92 ಸೈಟ್‌ಗಳ ಮಾರುಕಟ್ಟೆ ಮೌಲ್ಯ 100 ಕೋಟಿ ರೂಪಾಯಿ. ಇದುವರೆಗೂ ಒಟ್ಟು 400 ಕೋಟಿ ರೂಪಾಯಿ ಆಸ್ತಿಪಾಸ್ತಿಯನ್ನು ಜಪ್ತಿ ಮಾಡಿದ್ದೇವೆ ಎಂದ ಇ.ಡಿ ಮಾಹಿತಿ ನೀಡಿದೆ

 

Author:

...
Sushmitha N

Copy Editor

prajashakthi tv

share
No Reviews