America : ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಹೊಸ ದಾಖಲೆ ಬರೆಯಲಿದೆ ಭಾರತ...!

AMERICA: ಶುಭಾಂಶು ಶುಕ್ಲಾ ಇಂದು ಸಂಜೆ 5.22 ಕ್ಕೆ ಅಮೆರಿಕದ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್-4 ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪಯಣ ಆರಂಭಿಸಿದ್ದಾರೆ. ಈ ಮೂಲಕ ಭಾರತ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದೆ.

ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆಗೆ ಮುನ್ನಡೆಸಿದೆ. ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಇಂದು, ಅಮೆರಿಕದ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್-4 ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪಯಣ ಮಾಡಲಿದ್ದಾರೆ. ಈ ಮೂಲಕ ಅವರು ಸುನಿತಾ ವಿಲಿಯಮ್ಸ್ ಮತ್ತು ಕಲ್ಪನಾ ಚಾವ್ಲಾ ಅವರಂತೆ ಬಾಹ್ಯಾಕಾಶದಲ್ಲಿ ಭಾರತ ಮತ್ತೊಂದು ದಾಖಲೆ ಸೃಷ್ಟಿಸಲು ಮುಂದಾಗಿದ್ದಾರೆ. 

ಭಾರತವು ಆಕ್ಸಿಯಂ-4 ಮಿಷನ್‌ಗೆ 548 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಇದು ಭಾರತ-ಅಮೆರಿಕ ಬಾಹ್ಯಾಕಾಶ ಪಾಲುದಾರಿಕೆಯಲ್ಲಿ ಮತ್ತೊಂದು ಮಹತ್ವದ ಹಂತವಾಗಿದೆ, ಈ ನೌಕೆಯನ್ನು ಹೊತ್ತು ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಇಂದು ಸಂಜೆ 5.22ಕ್ಕೆ ಬಾಹ್ಯಾಕಾಶಕ್ಕೆ ಜಿಗಿಯಲಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತ ನೌಕೆ ಸಂಜೆ ಹೊರಟರೂ ಅದು ಐಎಸ್‌ಎಸ್‌ ತಲುಪಲು 28 ಗಂಟೆ ಬೇಕು. ಭೂಮಿಯ ವಿವಿಧ ಕಕ್ಷೆಯಲ್ಲಿ ಸುತ್ತಿದ ಬಳಿಕ ನೌಕೆ ಐಎಸ್‌ಎಸ್‌ ತಲುಪಲಿದೆ.

 

Author:

...
Sushmitha N

Copy Editor

prajashakthi tv

share
No Reviews