ಬೆಂಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕಾರು, ಬೈಕ್ ಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ..!

ಕಾರು ಮತ್ತು ಬೈಕ್‌ ಗೆ ಬೆಂಕಿ ಹಚ್ಚಿರುವುದು.
ಕಾರು ಮತ್ತು ಬೈಕ್‌ ಗೆ ಬೆಂಕಿ ಹಚ್ಚಿರುವುದು.
ಬೆಂಗಳೂರು ನಗರ

ಬೆಂಗಳೂರು: 

ಯುವತಿ ಪ್ರೀತಿಯನ್ನು ನಿರಾಕರಿಸಿದ್ದಕ್ಕಾಗಿ ಪಾಗಲ್‌ ಪ್ರೇಮಿಯು ಆಕೆಯ ತಂದೆಯ ಕಾರು ಹಾಗೂ ಬೈಕ್ ಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರಿನ ಸುಬ್ರಮಣ್ಯಪುರದಲ್ಲಿ ಶನಿವಾರ ನಡೆದಿದೆ.

ಆರೋಪಿಯನ್ನು ರಾಹುಲ್‌ ಎಂದು ಗುರುತಿಸಲಾಗಿದೆ. ಯುವತಿ ಪ್ರೀತಿ ನಿರಾಕರಿಸಿದಕ್ಕೆ ರೊಚ್ಚಿಗೆದ್ದು ಕಾರು ಮತ್ತು ಬೈಕ್‌ ಗಳಿಗೆ ರಾಹುಲ್ ತನ್ನ ಸ್ನೇಹಿತರ ಜೊತೆ ಬಂದು ಬೆಂಕಿ ಹಚ್ಚಿ ಹಲ್ಲೆ ಎಸಗಿದ್ದಾರೆ, ಮೂರು ನಾಲ್ಕು ಬೈಕ್ಗಳಲ್ಲಿ ಗ್ಯಾಂಗ್ ಸಮೇತ ಬಂದು, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಎದುರಿನ ಮನೆಯ ಮುಂದಿನ ಬೈಕ್ ಹಾಗೂ ಎರಡು ಕಾರುಗಳಿಗೆ ಬೆಂಕಿ ಇಟ್ಟಿದ್ದಾರೆ. ಬಳಿಕ ಸುಬ್ರಮಣ್ಯಪುರ ಶ್ರೀನಿಧಿ ಅಪಾರ್ಟ್ಮೆಂಟ್‌ ಬಳಿಯಿದ್ದ ಕಾರುಗಳಿಗೆ ಕೂಡ ಬೆಂಕಿ ಇಟ್ಟಿದ್ದಾರೆ. ವೇಳೆ ತಡೆಯಲು ಬಂದ ಸೆಕ್ಯೂರಿಟಿ ಗಾರ್ಡ್ ಮೇಲು ಕೂಡ ಆರೋಪಿಗಳು ಹಲ್ಲೆ ಮಾಡಿದ್ದಾರೆ.

ಘಟನೆ ಕುರಿತು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಲ್ಲಾ ಆಯಾಮಗಳಿಂದಲೂ ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಘಟನೆ ಬಳಿಕ ರಾಹುಲ್ ತಲೆಮರಿಸಿಕೊಂಡಿದ್ದು ಪೊಲೀಸರು ಆರೋಪಿ ಹುಡುಕಾಟವನ್ನು ಚುರುಕುಗೊಳಿಸಿದ್ದಾರೆ.
 

Author:

...
Editor

ManyaSoft Admin

Ads in Post
share
No Reviews