BELAGAVI : ಬಕ್ರೀದ್ ಸಂಭ್ರಮ | 5 ಲಕ್ಷ ಮೊತ್ತಕ್ಕೆ ಮೇಕೆ ಮಾರಾಟ ಮಾಡಿದ ರೈತ

BELAGAVI NEWS : ರಾಜ್ಯದೆಲ್ಲೆಡೆ ಬಕ್ರೀದ್ ಹಬ್ಬದ ಸಂಭ್ರಮ ಮನೆಮಾಡಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಟ್ನಾಳ ಗ್ರಾಮದ ರೈತ ದಂಪತಿ ಶಿವಪ್ಪ ಶೆಂಡೂರೆ ಮತ್ತು ಶಾಂತಾ ಶೆಂಡೂರೆ ಸಾಕಿದ ಎರಡು ಮೇಕೆಗಳು ದಾಖಲೆಮಟ್ಟದ ಬೆಲೆಗೆ ಮಾರಾಟವಾಗಿ ಎಲ್ಲರ ಗಮನ ಸೆಳೆದಿದೆ.

ಇನ್ನು ಪಂಜಾಬ್ ಮೂಲದ ಬೀತಲ್ ತಳಿಯ ಈ ಮೇಕೆಗಳಲ್ಲಿ ಒಂದನ್ನು ₹3 ಲಕ್ಷ ಮತ್ತು ಇನ್ನೊಂದನ್ನು ₹2.10 ಲಕ್ಷಕ್ಕೆ, ಒಟ್ಟಾರೆ ₹5.10 ಲಕ್ಷಕ್ಕೆ ವಿಜಯಪುರ ಮೂಲದ ಮೋಜಿಮ್ ಮತ್ತು ಆಸೀಫ್ ಎಂಬ ವ್ಯಾಪಾರಿಗಳು ಖರೀದಿಸಿದ್ದಾರೆ. ಈ ಇಬ್ಬರೂ 15 ದಿನಗಳ ಹಿಂದೆಯೇ ಮುಂಗಡ ಹಣ ನೀಡಿ ಮೇಕೆಗಳನ್ನು ಕಾಯ್ದಿರಿಸಿದ್ದರು.

ನೆನ್ನೆ ಖರೀದಿದಾರರು ಪೂರ್ಣ ಹಣ ನೀಡಿ ಮೇಕೆಗಳನ್ನು ತಾವು ಎಳೆದೊಯ್ದಾಗ, ವಿಶೇಷವಾದ ಸಂಭ್ರಮದ ವಾತಾವರಣ ಎದುರಾಯಿತು. ಮೇಕೆಗಳಿಗೆ ಗುಲಾಲು ಎರಚಿ, ಹೂವಿನ ಹಾರ ಹಾಕಿ, ಆರತಿ ಬೆಳಗಿಸಿ, ಸಂಪ್ರದಾಯದಂತೆ ಬೀಳ್ಕೊಡಲಾಯಿತು. ಈ ಯಶಸ್ಸನ್ನು ಸ್ಮರಿಸುವಂತೆ ಕುಟುಂಬವು ಕೇಕ್ ಕಟ್ ಮಾಡಿ ಸಂಭ್ರಮಿಸಿ ತಮ್ಮ ಸಂತೋಷ ವ್ಯಕ್ತಪಡಿಸಿದರು.

ಸಾಮಾನ್ಯವಾಗಿ ಬಕ್ರೀದ್ ಸಂದರ್ಭದಲ್ಲಿ ₹5,000 ರಿಂದ ₹50,000 ವರೆಗೆ ಮೇಕೆಗಳು ಮಾರಾಟವಾಗುವುದು ರೂಢಿ. ಆದರೆ ಈ ಮಾರಾಟ ರಾಜ್ಯದ ಪಶುಮೇಳಗಳ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.

Author:

...
Keerthana J

Copy Editor

prajashakthi tv

share
No Reviews