ಕೊರಟಗೆರೆ ಪತ್ರಕರ್ತರ ಸಂಘತುಮಕೂರು
ಪಾವಗಡದ ಹಿರಿಯ ಪತ್ರಕರ್ತನ ಮೇಲೆ ಅಕ್ರಮ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿಸಿದ ಭೂ ಮಾಫಿಯಾ ಮುಖಂಡ ನಾರಾಯಣರೆಡ್ಡಿ ವಿರುದ್ದ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡುವಂತೆ ಕೊರಟಗೆರೆ ಪತ್ರಕರ್ತರ ಸಂಘದ ಅಧ್ಯಕ್ಷ ಪುರುಷೋತ್ತಮ್ ಆಗ್ರಹಿಸಿದರು. ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಘಟಕದಿಂದ ಹಿರಿಯ ಪತ್ರಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿ ಪ್ರತಿಭಟನೆಯನ್ನು ಮಾಡಿದರು .
ಪಾವಗಡ ಹಿರಿಯ ಪತ್ರಕರ್ತ ಟಿ.ಎ.ರಾಮಾಂಜಿನಪ್ಪ ಮೇಲಿನ ಹಲ್ಲೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸುತ್ತದೆ. ಭೂ ಮಾಫಿಯಾ ಹೆಸರಲ್ಲಿ ಪ್ರತಿನಿತ್ಯ ಭೂತಾಯಿಯ ಅಗೆದು ಅಕ್ರಮವಾಗಿ ಹಣ ದೋಚುತ್ತಿರುವುದು ಇಡೀ ಪಾವಗಡಕ್ಕೆ ಗೊತ್ತಿರುವ ವಿಚಾರ. ಪತ್ರಕರ್ತರು ಭೂ ಮಾಪಿಯಾ ವಿರುದ್ದ ಪ್ರಶ್ನಿಸಿದರೇ ಮಹಿಳೆಯ ಮುಂದಿಟ್ಟುಕೊಂಡು ಇಂತಹ ನೀಚ ಕೆಲಸ ಮಾಡಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಕೊರಟಗೆರೆ ತಹಶೀಲ್ದಾರ್ ಮಂಜುನಾಥ.ಕೆ ಮಾತನಾಡಿ ಸಂವಿಧಾನದ ನಾಲ್ಕನೆಯ ಅಂಗ ಪ್ರತಿಕೋದ್ಯಮ. ಪಾವಗಡದ ಹಿರಿಯ ಪತ್ರಕರ್ತನ ಮೇಲೆ ನಡೆದಿರುವ ಹಲ್ಲೆ ಖಂಡನೀಯ. ನಾವೇಲ್ಲರೂ ಪತ್ರಕರ್ತರ ಜೊತೆಗೂಡಿ ಸಾರ್ವಜನಿಕ ಕೆಲಸ ಮಾಡೋಣ. ಪತ್ರಕರ್ತರ ಜೊತೆ ನಾವೇಂದು ಇರುತ್ತೇವೆ. ಪತ್ರಕರ್ತರ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ರಂಗಧಾಮಯ್ಯ, ನಿರ್ದೇಶಕ ಎನ್.ಮೂರ್ತಿ, ತಾಲೂಕು ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಚಿದಂಬರ, ಸದಸ್ಯರಾದ ಪದ್ಮನಾಬ್, ನವೀನ್, ಲೊಕೇಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.