ತುಮಕೂರು :
ಪರಮಪೂಜ್ಯ ಸ್ವಾಮಿ ಜಪಾನಂದ ಜೀ ಅವರ ಪ್ರತಿ ಕಾರ್ಯವು ಜನಮನ್ನಣೆ ಗಳಿಸುವಂತದ್ದು, ತಮ್ಮ ಪ್ರತಿಕಾರ್ಯದಲ್ಲಿಯೂ ಅವರು ಮಾನವೀಯತೆಯನ್ನು ಮೆರೆಯುತ್ತಾರೆ. ಪಾವಗಡದಲ್ಲಿ ಬರಗಾಲದಲ್ಲಿ ರೈತರಿಗೆ ಮೇವು ನೀಡುವ ಮೂಲಕ ಜನಮೆಚ್ಚುಗೆ ಗಳಿಸಿದ್ದರು. ಇಡೀ ರಾಜ್ಯವೇ ಅವರನ್ನು ಕೊಂಡಾಡಿತ್ತು. "ಪ್ರಸಾದ ಪಾತ್ರೆ ಯೋಜನೆಯು ವಿದ್ಯಾರ್ಥಿಗಳಿಗೆ ಆಶಾಕಿರಣ”ಎಂಬ ಶೀರ್ಷಿಕೆಯಡಿ ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಯೋಜನೆಯನ್ನು ತುಮಕೂರಿನಲ್ಲಿ ಉದ್ಘಾಟಿಸಿದರು.
ಇನ್ನು ತುಮಕೂರಿನ ಬಿ.ಹೆಚ್ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಯೋಜನೆಗೆ ಚಾಲನೆ ನೀಡಿದರು, ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಾ, “ಇದು ದೇಶದ ಮೊದಲ ವಿಶ್ವವಿದ್ಯಾನಿಲಯವಾಗಿದ್ದು, ಮಧ್ಯಾನ್ಹ ಭೋಜನವನ್ನು ಸ್ನಾತಕ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುತ್ತಿದೆ. 'ಪ್ರಸಾದ ಪಾತ್ರೆ' ಎಂಬ ಹೆಸರಿನಲ್ಲಿ ಈ ಯೋಜನೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿದೆ ಎಂದರು.
ಶ್ರೀ ಅನ್ನಪೂರ್ಣೇಶ್ವರಿ ಮಧ್ಯಾನ್ಹ ಭೋಜನ ಯೋಜನೆಗೆ ತುಮಕೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನ್ಯಾ. ನೂರ್ ಉನ್ನೀಸಾ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ||ಎಂ.ವೆಂಕಟೇಶ್ವರಲು ಹಾಗೂ ನ್ಯಾಯಾಧೀಶ ನ್ಯಾ. ನೂರ್ ಉನ್ನೀಸಾ ಉಪಸ್ಥಿತರಿದ್ದರು.