ಚೀನಾದಲ್ಲಿ ಮತ್ತೊಂದು ವೈರಸ್ ಭೀತಿ ಇದ್ಯಾ..?

ಅದ್ಯಾವ ವೈರಸ್‌.. ಆ ವೈರಸ್‌ನಿಂದ ಏನೆಲ್ಲಾ ತೊಂದ್ರೆ ಆಗುತ್ತೆ… ಆ ವೈರಸ್‌ ಕೂಡ ಕೊರೊನಾ ಥರನೇ ಸಾವು ಹೆಚ್ಚಾಗಿಸುತ್ತಾ.. ಆ ವೈರಸ್‌ನ ಎಫೆಕ್ಟ್‌ ಎಷ್ಟಿದೆ.. ಜಗತ್ತಿಗೆ ಮತ್ತೆ ಗಂಡಾಂತರ ಕಾದಿದ್ಯಾ ಈ ಎಲ್ಲದರ ಬಗ್ಗೆ ಇವತ್ತು ನಾನು ತಿಳಿಸಿಕೊಡ್ತಾ ಹೋಗ್ತೀನಿ.. ಈ ಸ್ಟೋರಿಯನ್ನ ಕಂಪ್ಲೀಟ್‌ ಆಗಿ ನೋಡಿ… 

ಹೋದೆಯಾ ಪಿಶಾಚಿ ಎಂದ್ರೆ, ಬಂದೆ ಗವಾಕ್ಷಿ ಅನ್ನುವಂತೆ ಜಗತ್ತಿಗೆ ಮತ್ತೊಂದು ಚೀನಾ ವೈರಸ್​​​​ ಒಕ್ಕರಿಸಲು ಕಾದು ಕುಳಿತಿದ್ಯಂತೆ.. ಹೌದು ಚೀನಾದಲ್ಲಿ ಕೊರೊನಾ ವೈರಸ್ ಮಾದರಿಯ ಹೂಮನ್ ಮೆಟಾನ್ಯುಮೋ ವೈರಸ್ ಅಂದ್ರೆ HMPV  ಸೋಂಕು ರಣಕೇಕೆ ಹಾಕುತ್ತಿದ್ದು, ಡ್ರ್ಯಾಗನ್​ ದೇಶದಲ್ಲಿ ಮೆಡಿಕಲ್​ ಎಮರ್ಜೆನ್ಸಿ ಘೋಷಿಸಲಾಗಿದ್ಯಂತೆ. ಹೊಸ ವೈರಸ್ ಹರಡುವಿಕೆಯಿಂದ ಇಡೀ ಜಗತ್ತಿನಲ್ಲಿ ಮತ್ತೆ ನಡುಕ ಹುಟ್ಟಿಸಿದ್ದು, ಈ ಬಾರಿ ಒಂದಲ್ಲ, ಎರಡಲ್ಲ, ಹಲವು ವೈರಸ್​ಗಳ ಕಾಟ ಶುರುವಾಗುವ ಭೀತಿ ಎದುರಾಗಿದೆ.  ಅಲ್ದೇ ಚೀನಾದಲ್ಲಿ ಮತ್ತೆ ಲಾಕ್‌ಡೌನ್‌, ಸೀಲ್‌ಡೌನ್‌, ಸ್ಯಾನಿಟೈಜರ್‌, ಕ್ವಾರಂಟೈನ್‌, ವ್ಯಾಕ್ಸಿನ್‌ ಎಂಬ ವಿಚಾರ ಹರಡುತ್ತಿದ್ದು ರೋಗಿಗಳಿಂದ ಆಸ್ಪತ್ರೆಗಳು ಮತ್ತು ಶವಗಾರಗಳು ತುಂಬಿ ತುಳುಕುತ್ತಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಹಾಗೂ ಸೋಷಿಯಲ್‌ ಮಿಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.. ಇವೆಲ್ಲಾ ಸತ್ಯಾನಾ.. ಸುಳ್ಳಾ ಎಂಬ ಮಾಹಿತಿಯನ್ನು ನಾವು ಚರ್ಚೆ ಮಾಡುತ್ತಾ ಹೋಗೋಣ…

ಇನ್ನು ಈ ವೈರಸ್‌ಗೆ ಸಂಬಂಧಪಟ್ಟಂತೆ ಮಂಡ್ಯದ ಶಾಸಕ ರವಿ ಗಣಿಕ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.. ನಾಲ್ಕು ದಿನಗಳ ಕಾಲ ಚೀನಾ ಪ್ರವಾಸದಲ್ಲಿದ್ದ ಶಾಸಕ ರವಿ ಗಣಿಗ ಚೀನಾದ ಪರಿಸ್ಥಿತಿಯನ್ನ ಕಣ್ಣಾರೆ ಕಂಡು ವಿವರಿಸಿದ್ದಾರೆ.. ಶೇ.80% ರಷ್ಟು ಜನ ಮಾಸ್ಕ್ ಧರಿಸಿ ಓಡಾಡ್ತಿದ್ದಾರೆ, ಹೊಸ ವೈರಸ್ ಬಂದಿರಬಹುದು ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ… ಹಾಗಾದ್ರೆ ಜಗತ್ತಿಗೆ ಮತ್ತೊಂದು ವೈರಸ್‌ ಆತಂಕ ಸೃಷ್ಟಿಯಾಗಿದ್ಯಾ ಎಂಬ ಅನುಮಾನ ಕಾಡುತ್ತಲೇ ಇದೆ…

ಇನ್ನು ಚೀನಾದಲ್ಲಿ ವೈರಸ್‌ ಹರಡುವಿಕೆಯ ಬಗ್ಗೆ ಚೀನಾದಲ್ಲಿರೋ ಕನ್ನಡಿಗರನ್ನು ಪ್ರಜಾಶಕ್ತಿ ಟಿವಿ ಸಂಪರ್ಕಿಸುವ ಕೆಲಸವನ್ನು ಮಾಡಿದ್ದು, ಚೀನಾದಲ್ಲಿ ಈ ರೀತಿಯ ವೈರಸ್‌ ಹರಡಿಲ್ಲ… ಅಂತಹ ವಾತಾವರಣ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.. ಶೀತ ಕಾಲದಲ್ಲಿ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈಗ ಕೋಲ್ಡ್‌ ಜಾಸ್ತಿ ಆಗಿರೋದ್ರಿಂದ ಜನರಲ್ಲಿ ಜ್ವರ ಜಾಸ್ತಿ ಆಗ್ತಿದೆ.. ಉಳಿದಂತೆ ರಿಲೀಸ್‌ ಆಗಿರೋ ಫೋಟೋ, ವಿಡಿಯೋಗಳು ಕೊರೊನಾ ಕಾಲದ್ದವು.. ಹೀಗಾಗಿ ಜನರು ಗಾಬರಿ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ಚೀನಾದಲ್ಲಿ ಎಲ್ಲಾ ನಾರ್ಮಲ್‌ ಲೈಫ್‌ ಇದೆ.. ಮುಂದಿನ ತಿಂಗಳು ಚೈನೀಸ್‌ ನ್ಯೂ ಇಯರ್‌ ಹಬ್ಬ ಬರ್ತಾ ಇದೆ… ಅದ್ರ ಪ್ರಿಪೇರೇಷನ್‌ ಅಲ್ಲಿ ಜನ ಬ್ಯೂಸಿಯಾಗಿದ್ದಾರೆ.. ಚೀನಾದಲ್ಲಿ ಈ ನ್ಯೂ ಇಯರ್‌ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡ್ತಾರೆ.. ಆ ಹಬ್ಬದ ಪ್ರಯುಕ್ತ ಎಲ್ಲಿಗೆ ಹೋಗೋಣ, ಹೇಗೆ ಸೆಲೆಬ್ರೇಟ್‌ ಮಾಡೋಣ.. ಟೂರ್‌ ಹೋಗುವ ಬಗ್ಗೆ ಚರ್ಚೆ ಮಾಡುವುದರಲ್ಲಿ ಚೈನೀಸ್‌ ಜನ ಬ್ತೂಸಿ ಇದ್ದಾರೆ ಹೊರತು ಯಾವುದೇ ವೈರಸ್‌ ಹರಡಿರುವ ಬಗ್ಗೆ ಚರ್ಚೆ ಆಗ್ತಿಲ್ಲ.. ಅಂತಹದೊಂದು ಕಾನ್‌ಸೆಲ್ಟ್‌ ಸ್ವಲ್ಪವೂ ಇಲ್ಲ ಎಂದು ಚೀನಾದಲ್ಲಿರುವ ಭಾರತೀಯರು ನಮ್ಮ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ಈ ವೈರಸ್‌ ಹರಡಿರುವ ಬಗ್ಗೆ ಮಾಹಿತಿ ಹೊರಹಾಕದಂತೆ ಚೀನಾ ಸರ್ಕಾರ ಆದೇಶ ನೀಡಿರಬಹುದು ಎಂಬ ಅನುಮಾನ ಸಹಜವಾಗಿ ಮೂಡುತ್ತದೆ.. ಆದ್ರೆ ಇಲ್ಲಿನ ಸೋಶಿಯಲ್‌ ಮಿಡಿಯಾದಲ್ಲಿ ಆಗಿರಬಹುದು ಅಥವಾ ಜನರಿಂದ ಮಾಹಿತಿ ಬಂದಿರುವ ಪ್ರಕಾರ ಈ ವೈರಸ್‌ ಚೀನಾದಲ್ಲಿ ಹರಡಿರುವುದು ಸುಳ್ಳು ಎಂದು ಅಲ್ಲಿರುವರು ಮಾಹಿತಿ ಹಂಚಿಕೊಂಡಿದ್ದಾರೆ..

 

ಈ ಮಧ್ಯೆ ಜಪಾನ್ ಮತ್ತು ಹಾಂಕಾಂಗ್ ದೇಶಗಳಲ್ಲೂ HMPV ವೈರಸ್‌ ವ್ಯಾಪಕವಾಗಿ ಹರಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ವರದಿ ಪ್ರಕಾರ, ಜಪಾನ್‌ನಲ್ಲಿ ಒಂದು ವಾರದಲ್ಲಿ 7 ಲಕ್ಷದ 18 ಸಾವಿರ ಮಂದಿಯರಲ್ಲಿ ಈ ಸೋಂಕು ಹರಡಿದೆ ಎಂದು ಮಾಹಿತಿ ಹೊರಬಿದಿದ್ದೆ. ಇನ್ನೊಂದೆಡೆ ಚೀನಾದ ನೆರೆಯ ದೇಶವಾದ ಹಾಂಕಾಂಗ್​ನಲ್ಲೂ ಸೊಂಕು ವ್ಯಾಪಿಸಿದ್ದು, 1000ಕ್ಕೂ ಹೆಚ್ಚು ಕೇಸ್​ಗಳು ದಾಖಲಾಗಿದೆ ಎಂಬ ಸುದ್ದಿ ಹೊರ ಬಿದ್ದಿದೆ…

ಅದೇನೇ ಆಗಲಿ, ಚೀನಾದಲ್ಲಿ ಮತ್ತೊಂದು ವೈರಸ್‌ ಉದ್ಭವ ಆಗಿದ್ಯಾ, ಇಲ್ವಾ ಎಂದು ಮಾಹಿತಿ ನೀಡಬೇಕಿರೋದು ನಮ್ಮ ವಿಶ್ವಸಂಸ್ಥೆ.. ಅಂತರಾಷ್ಟ್ರೀಯ ಮಾಧ್ಯಮದಲ್ಲಿ ಹಾಗೂ ಸೋಷಿಯಲ್‌ ಮಿಡಿಯಾದಲ್ಲಿ ಚೀನಾದ ವೈರಸ್‌ ಸಖತ್‌ ಸದ್ದು ಮಾಡ್ತಿದ್ದು ಇದ್ರ ಸತ್ಯಾ ಸತ್ಯತೆಯನ್ನು ವಿಶ್ವಸಂಸ್ಥೆ ಖಚಿತ ಪಡಿಸಿದ್ರೆ ಮಾತ್ರ ಜನರಲ್ಲಿ ಆತಂಕ ದೂರವಾಗುವ ಸಾಧ್ಯತೆ ಇದೆ.

ಇನ್ನೊಂದೆಡೆ ಚೀನಾ ವೈರಸ್‌ ಬಗ್ಗೆ ಜಗತ್ತಿನಲ್ಲಿ ಸಾಕಷ್ಟು ಸುದ್ದಿ ಹರಿದಾಡ್ತಿದ್ದು, ವಿಶ್ವ ಸಂಸ್ಥೆಯ ಕಾರ್ಯದರ್ಶಿಗಳಾಗಲಿ ಈ ಬಗ್ಗೆ ಇನ್ನು ದೃಢೀಕರಿಸದಿರುವುದು ಕೂಡ ಚೀನಾದಲ್ಲಿ ವೈರಸ್‌ ಹರಡಿದ್ಯಾ ಇಲ್ವಾ ಎಂಬ ಅನುಮಾನ ಹೆಚ್ಚಾಗ್ತಲೇ ಇದೆ…

 

 

 

 

 

Author:

...
Reporter

ManyaSoft Admin

Ads in Post
share
No Reviews