ಚೀನಾದಲ್ಲಿ ಪತ್ತೆಯಾದ ಮತ್ತೊಂದು ಭಯಾನಕ ವೈರಸ್

ಕೊವೀಡ್‌ ಬಳಿಕ ಮತ್ತೊಂದು ಮಹಾಮಾರಿ ಆತಂಕ ಶುರುವಾಗಿದ್ದು, ಕೊವೀಡ್‌ ವೈರಸ್‌ ಪತ್ತೆಯಾಗಿದ್ದ ಅದೇ ಚೀನಾದಲ್ಲಿ ಇದೀಗ ಬಾವಲಿ ಮೂಲಕ ಮನುಷ್ಯರಿಗೆ ಹರಡುವ HKU5-COV-2 ಎಂಬ ವೈರಾಣು ಪತ್ತೆಯಾಗಿದೆ.

ಚೀನಾದ ವುಹಾನ್‌ ಇನ್‌ ಸ್ಟಿಟ್ಯೂಟ್‌ ಆಫ್‌ ವೈರಾಲಜಿಯ ಸಂಶೋಧಕರು ಬಾವಲಿಗಳಲ್ಲಿ ಹೊಸ ಕರೋನ ವೈರಸ್‌ ಅನ್ನು ಪತ್ತೆಹಚ್ಚಿದ್ದಾರೆ. ಈ ವೈರಸ್‌ ಬಹುತೇಕ ಕೋವಿಡ್-‌ 19 ಗೆ ಕಾರಣವಾದ ವೈರಸ್‌ ಗೆ ಹೋಲಿಕೆಯಾಗುತ್ತಿದೆ ಎನ್ನಲಾಗಿದೆ. ವುಹಾನ್‌ ಲ್ಯಾಬ್‌ ನಲ್ಲಿ ಪತ್ತೆಯಾದ ಕೋವಿಡ್-19‌ ತರಹದ ವೈರಸ್‌ ಪ್ರಾಣಿಯಿಂದ ಮನುಷ್ಯನಿಗೆ ಹರಡುವ ಸಾಧ್ಯತೆಯನ್ನು ಹೊಂದಿದೆ. HKUS-COV-2 ಎಂದು ಕರೆಯಲ್ಪಡುವ ವೈರಸ್‌ ಸುಲಭವಾಗಿ ಮಾನವ ಜೀವಕೋಶ ಗಳನ್ನು ವುಹಾನ್‌ ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಬಗ್ಗೆ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದ್ದು, HKU5-COV-2 ಎಂಬ ವೈರಸ್‌ ಅನ್ನು ಬ್ಯಾಟ್‌ ವುಮೆನ್‌ ಎಂದು ಕರೆಯಲ್ಪಡುವ ಪ್ರಸಿದ್ದ ವಿಜ್ಞಾನಿ ಶಿ ಝೇಂಗ್ಲಿ ನೇತೃತ್ವದ ವೈರಾಲಜಿಸ್ಟ್‌ ಗಳ ತಂಡವು ಕಂಡುಹಿಡಿದಿದೆ. HKU5-COV-2 ಎಂಬುದು ಮೆರ್ಬೆಕೊವೈರಸ್‌ ಉಪಜಾತಿಗೆ ಸೇರಿದ ಕೊರೊನಾವೈರಸ್‌ ಆಗಿದ್ದು, ಇದು ಮಿಡಲ್‌ ಈಸ್ಟ್‌ ರೆಸ್ಪಿರೇಟರಿ ಸಿಂಡ್ರೋಮ್‌ ಗೆ ಕಾರಣವಾಗುವ ವೈರಸ್‌ ಅನ್ನು ಸಹ ಒಳಗೊಂಡಿದೆ. ವಿಜ್ಞಾನಿಗಳು ಹೊಸ ವೈರಸ್‌ ಈ ಹಿಂದಿನ ಕೋವಿಡ್‌ ವೈರಸ್‌ ನಂತೆಯೇ ಮಾನವನಿಗೆ ಸೋಂಕಿ ಉಸಿರಾಟ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

Author:

...
Editor

ManyaSoft Admin

Ads in Post
share
No Reviews