AMRUTHA IYENGAR : ಚಂದನವನದ ಮುದ್ದು ಸುಂದರಿ ಅಮೃತಾ ಅಯ್ಯಂಗಾರ್ [Amruta Iyengar] ಮಳೆಯಲ್ಲಿ ನೆನೆಯುತ್ತಾ ಸಖತ್ ಆಗಿ ENJOY ಮಾಡ್ತಿದ್ದಾರೆ. ತನ್ನ ನವಿಲೆ ಕಣ್ಣಲ್ಲೇ ಮಳೆ ಬೀಳಿಸುತ್ತಿರುವಂತೆ ತಮ್ಮ INSTAGRAM ನಲ್ಲಿ ಮುದ್ದಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ಫೋಟೋಗಳಲ್ಲಿ ಅಮೃತಾ, ಕೆಂಪು ಬಣ್ಣದ ಸೀರೆಯುಟ್ಟು, ಹಳದಿ ಬಣ್ಣದ ಸ್ಲೀವ್ಲೆಸ್ ಬ್ಲೌಸ್ ಧರಿಸಿ, ದೇವತೆಯಂತೆ ಕಾಣ್ತಿದ್ದಾರೆ. ಇನ್ನು ಈ PHOTOಗಳಲ್ಲಿ ಮಳೆ ಬೀಳುತ್ತಿದ್ದಾಗ, ಕೊಡೆ ಹಿಡಿದು ನಗುತ್ತಾ ಪೋಟೋಗೆ POSE ಕೊಟ್ಟಿದ್ದಾರೆ.
ಅಮೃತಾ ಮುದ್ದಾದ ನಗು ನೋಡಿ, ಜನ ತಕ್ಷಣ ಯಾಕೆ ಇಷ್ಟು ಚಂದ ನೀನು, ದೃಷ್ಟಿ ಬೊಟ್ಟನಿಡಲೇನು ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟೆ ಅಲ್ಲ ನಿಮ್ಮ ಹೆಸರು ಅಮೃತಾ ಅಯ್ಯರ್ ಅಲ್ಲ, BUEATY FULL IYENGAR ಅಂತ ಇರಬೇಕಿತ್ತು ಎಂದು COMMENTಗಳನ್ನು ಮಾಡಿದ್ದಾರೆ. ಇನ್ನು ಅಮೃತಾ ಅಯ್ಯಂಗಾರ್ ಕೊಡೆ ಹಿಡಿದು, ಮಳೆಯಲ್ಲಿ ENJOY ಮಾಡ್ತಿರೋದನ್ನು ನೋಡಿ, ಮೇಡಂ ಮುಂಗಾರು ಮಳೆ 3 ಸಿನಿಮಾಗೆ ರೆಡಿಯಾಗ್ತಿದ್ದೀರಾ ಎಂದು ಕಾಮೆಂಟ್ಗಳನ್ನು ಮಾಡಿದ್ದಾರೆ.
ಇನ್ನು ಅಮೃತಾ ಅಯ್ಯಂಗಾರ್, 'ಸಿಂಹ ಹಾಕಿದ ಹೆಜ್ಜೆ' ಸಿನಿಮಾದಿಂದ ಸಿನಿ ಪ್ರಯಾಣ ಆರಂಭಿಸಿದ್ದು, ಆ ಬಳಿಕ 'ಲವ್ ಮಾಕ್ಟೇಲ್' ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದರು. ಆ ಚಿತ್ರವೇ ಅವರಿಗೆ ಜನಪ್ರಿಯತೆ ತಂದಿತ್ತು. ಅದನ್ನೆ ಮುಂದುವರೆಸಿ 'ಲವ್ ಮಾಕ್ಟೇಲ್ 2', 'ಹೊಯ್ಸಳ', 'ಬಡವ ರಾಸ್ಕಲ್', 'ವಿಂಡೋ ಸೀಟ್', 'ಅಬ್ಬಬ್ಬಾ' ಸಿನಿಮಾಗಳಲ್ಲಿ ಅಭಿನಯಿಸಿದರು. 'ಬಡವ ರಾಸ್ಕಲ್' ಸಿನಿಮಾಗಾಗಿ FILMFARE ಹಾಗೂ SIMA AWARD ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇತ್ತೀಚೆಗೆ ಗ್ಲಾಮರ್, ಔದಾರ್ಯ ಮತ್ತು ನೈಜ ಅಭಿವ್ಯಕ್ತಿಯ ಮಿಶ್ರಣದಂತಿರುವ ಅಮೃತಾ, ಚಂದನವನದಲ್ಲಿ SIMPLE STAR ಅಷ್ಟೇ ಅಲ್ಲ, FASION ICON ಆಗಿ ಬೆಳೆದಿದ್ದಾರೆ. ಇನ್ನು ನಟಿಯ ಈ ಪೋಟೋಗಳನ್ನು ನೋಡಿ ಅಭಿಮಾನಿಗಳು FIDA ಆಗಿದ್ದಾರೆ.