ಗುಬ್ಬಿ:
ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಯಡವನಳ್ಳಿ ಮಜರೆ ಕಡೇಕೋಡಿಪಾಳ್ಯ ಗ್ರಾಮದ ಶ್ರೀ ಹನುಮಂತ ದೇವರು ಹಾಗೂ ಶ್ರೀ ತಿರುಮಲೇಶ್ವರಸ್ವಾಮಿಯ ನೂತನ ಶಿಲಾ ದೇಗುಲ ಉದ್ಘಾಟನೆ ಸೇರಿದಂತೆ ವಿಮಾನಗೋಪುರ ಕಳಸ ಪ್ರತಿಷ್ಠಾಪನೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಇನ್ನು ಇದೇ ವೇಳೆ ಗ್ರಾಮದ ಶ್ರೀ ಶಕ್ತಿ ಆಂಜನೇಯಸ್ವಾಮಿಯನ್ನು ತುಮಕೂರಿನ ಲಕ್ಷ್ಮೀ ಆನೆಯ ಮೇಲೆ ಕೂರಿಸಿ ಅಂಬಾರಿ ಉತ್ಸವ ನಡೆಸಿದ್ದು ವಿಶೇಷವಾಗಿತ್ತು. ಅಂಬಾರಿ ಉತ್ಸವವು ಊರಿನ ಪ್ರಮುಖ ರಾಜ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಭಕ್ತರು ಅಂಬಾರಿ ಉತ್ಸವ ಕಂಡು ಜೈಂಕಾರದ ಸುರಿಮಳೆ ಸುರಿಸಿದರು.
ಶ್ರೀ ಹನುಮಂತ ದೇವರ ಕಳಸ ಗೋಪುರದ ವೇಳೆ ನಂದಿಧ್ವಜ ಕುಣಿತ, ಲಿಂಗದವೀರರ ಕುಣಿತ ಹಾಗೂ ಮಂಗಳವಾದ್ಯ ಕಲಾತಂಡ ಗಳೊಂದಿಗೆ ಅತ್ಯಂತ ಸಂಭ್ರಮದಿಂದ ನಡೆಸಲಾಯ್ತು. ಈ ಅಂಬಾರಿ ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರ ಪಾಲ್ಗೊಂಡು ದೇವರ ಭಕ್ತಿಗೆ ಪಾತ್ರರಾದರು.
ಶ್ರೀ ಶಕ್ತಿ ಆಂಜನೇಯಸ್ವಾಮಿಯ ಅಂಬಾರಿ ಉತ್ಸವದ ಜೊತೆಗೆ ಶ್ರೀ ಸಿದ್ದರಾಮೇಶ್ವರಸ್ವಾಮಿ, ಚಿಕ್ಕಪುರದಮ್ಮ, ಆಂಜನೇಯಸ್ವಾಮಿ, ದಂಡಿನಮಾರಮ್ಮ, ಕೊಲ್ಲಾಪುರದಮ್ಮ, ಲಕ್ಷ್ಮೀದೇವರು,ಮಾರಮ್ಮ ದೇವರುಗಳ ಪಲ್ಲಕ್ಕಿ ಉತ್ಸವ ಕೂಡ ಇದೆ ಸಂದರ್ಭದಲ್ಲಿ ನಡೆಯಿತು ಅಂಬಾರಿ ಉತ್ಸವಕ್ಕೆ ಬಂದಿದ್ದ ಸಾವಿರಾರು ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.