Koratagere: ಅಲಪನಹಳ್ಳಿ ಶಾಲೆಯ ಮುಖ್ಯಶಿಕ್ಷಕ ಅಮಾನತು

Ramachandrappa head master
Ramachandrappa head master
ತುಮಕೂರು

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ದೊಡ್ಡಸಾಗ್ಗೆರೆ ಗ್ರಾಪಂ ವ್ಯಾಪ್ತಿಯ ಅಲಪನಹಳ್ಳಿ ಸರಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರಭಾರ ಮುಖ್ಯಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮಚಂದ್ರಯ್ಯ.ಹೆಚ್.ಆರ್ ಅಮಾನತು ಆಗಿದ್ದಾರೆ. ಶಾಲೆಯ ಸಮಯದಲ್ಲಿ ವಿದ್ಯಾರ್ಥಿಗಳ ಜೊತೆ ಏರುಧ್ವನಿಯಲ್ಲಿ ಮಾತನಾಡೋದು, ಮನಸ್ಸಿಗೆ ಬಂದಂತೆ ಮಕ್ಕಳಿಗೆ ಹೆದರಿಸೋದು ಸೇರಿದಂತೆ ಶಾಲೆಯಲ್ಲಿ ದುರ್ನಡತೆಯ ನಡವಳಿಕೆ ಬಗ್ಗೆ ರಾಮಚಂದ್ರಯ್ಯ ವಿರುದ್ಧ ಆರೋಪಗಳಿದ್ದವು.

ಈ ಬಗ್ಗೆಎಸ್‌ಡಿಎಂಸಿ ಕಮಿಟಿ ಮತ್ತು ಗ್ರಾಮದ ಪೋಷಕರು ನೀಡಿದ ದೂರಿನ ಅನ್ವಯ ಮುಖ್ಯಶಿಕ್ಷಕನನ್ನ ಅಮಾನತು ಮಾಡಿ ಬಿಇಓ ಆದೇಶ ಮಾಡಿದ್ದಾರೆ.ಪೋಷಕರು ಮತ್ತು ಎಸ್‌ಡಿಎಂಸಿ ಕಮಿಟಿ ದೂರಿನ ಅನ್ವಯ ಪರಿಶೀಲನೆ ನಡೆಸಿದ ನಂತರ ತನಿಖೆ ಕಾಯ್ದಿರಿಸಿ ಮುಖ್ಯಶಿಕ್ಷಕನ ಅಮಾನತು ಮಾಡಲಾಗಿದೆ ಎಂದು ಪ್ರಜಾಶಕ್ತಿ ವಾಹಿನಿಗೆ ಬಿಇಓ ನಟರಾಜು ಸ್ಪಷ್ಟನೆ ನೀಡಿದ್ದಾರೆ

Author:

share
No Reviews