ಸಾಂಧರ್ಭಿಕ ಚಿತ್ರಆರೋಗ್ಯ-ಜೀವನ ಶೈಲಿ
Hair Tips: ತಲೆಹೊಟ್ಟು ಶುಚಿಯಾಗಿರದೆ ಇದ್ದರೆ ಆಗ ತಲೆಹೊಟ್ಟು ಅತಿಯಾಗಿ ಬರುವುದು ಮತ್ತು ಇದು ತುಂಬಾ ಕಿರಿಕಿರಿ ಉಂಟು ಮಾಡುವಂತಹ ಕೂದಲಿನ ಸಮಸ್ಯೆ. ತಲೆಹೊಟ್ಟಿನಿಂದಾಗಿ ಕೂದಲು ಕೂಡ ಒಣಗಿದಂತೆ ಆಗುವುದು ಮತ್ತು ನಿಸ್ತೇಜವಾಗಬಹುದು.
ಬೇವಿನ ಎಲೆಗಳನ್ನು ಜಗಿಯಿರಿ!
ಪ್ರತಿನಿತ್ಯ ಬೆಳಗ್ಗೆ ಕೆಲವು ಬೇವಿನ ಎಲೆಗಳನ್ನು ಜಗಿದರೆ ಆಗ ಅದು ತಲೆಹೊಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡುವುದು ಎಂದು ತಜ್ಞರು ಹೇಳಿರುವರು.
- ಎಲೆಯು ತುಂಬಾ ಕಹಿಯಾಗಿರುವ ಕಾರಣದಿಂದಾಗಿ ಇದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿಕೊಂಡು ಸೇವನೆ ಮಾಡಿ. ಎಲೆಯನ್ನು ಕುದಿಸಿ, ಅದರ ನೀರು ತೆಗೆದು ಅದಕ್ಕೆ ಜೇನುತುಪ್ಪ ಹಾಕಿ ಕುಡಿಯಬಹುದು. ಇದರ ಲಾಭಗಳು ಕೆಲವೇ ದಿನಗಳಲ್ಲಿ ನಿಮಗೆ ತಿಳಿದುಬರಲಿದೆ.
ಬೇವಿನ ಎಣ್ಣೆ
- ಬೇವಿನ ಎಲೆಗಳನ್ನು ತೆಂಗಿನ ಎಣ್ಣೆಗೆ ಹಾಕಿಕೊಂಡು ಅದರ ಎಣ್ಣೆ ತಯಾರಿಸಿಕೊಳ್ಳಬಹುದು. ಇದನ್ನು ಕುದಿಸಿಕೊಂಡು ಅದಕ್ಕೆ ಕೆಲವು ಹನಿ ಲಿಂಬೆರಸ ಹಾಕಿ.
- ಈ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಂಡ ಬಳಿಕ ಬಿಸಿಲಿಗೆ ಹೊರಗಡೆ ಹೋಗಬೇಡಿ. ಲಿಂಬೆಯು ಬಿಸಿಲಿನಿಂದಾಗಿ ಕೂದಲಿಗೆ ಹಾನಿ ಉಂಟು ಮಾಡಬಹುದು. ಈ ಎಣ್ಣೆಯನ್ನು ಸರಿಯಾಗಿ ತಲೆಬುರುಡೆಗೆ ಉಜ್ಜಿಕೊಳ್ಳಿ. ರಾತ್ರಿಯಿಡಿ ಹಾಗೆ ಬಿಡಿ ಮತ್ತು ಬೆಳಗ್ಗೆ ಇದನ್ನು ತೊಳೆಯಿರಿ.
ಬೇವು ಮತ್ತು ಮೊಸರು
- ಬೇವು ಮತ್ತು ಮೊಸರು ತಲೆಹೊಟ್ಟು ನಿವಾರಿಸಲು ತುಂಬಾ ಸಹಕಾರಿ. ಮೊಸರನ್ನು ತಲೆಹೊಟ್ಟು ನಿವಾರಣೆ ಮಾಡಲು ಪ್ರಮುಖವಾಗಿ ಮೊಸರಿನ ಜತೆಗೆ ಬಳಕೆ ಮಾಡಿದರೆ ಆಗ ಕೂದಲು ಬಲಗೊಳ್ಳುವುದು ಮತ್ತು ಸುಂದರವಾಗುವುದು. ಬೇವಿನ ಎಲೆಗಳನ್ನು ಜಜ್ಜಿಕೊಂಡು ಅದಕ್ಕೆ ಮೊಸರು ಹಾಕಿ.
- ಇದರ ಬಳಿಕ ತಲೆಬುರುಡೆಗೆ ಹಚ್ಚಿ. ಹಾಗೆ ಇದನ್ನು 15-20 ನಿಮಿಷ ಕಾಲ ಬಿಡಿ ಮತ್ತು ಇದರ ಬಳಿಕ ತೊಳೆಯಿರಿ. ತಲೆಬುರುಡೆಗೆ ಇದು ಶಮನ ನೀಡುವುದು.