VAISHNAVI GOWDA : ಕಿರುತೆರೆ ನಟಿ ವೈಷ್ಣವಿ ಗೌಡ ಅದ್ಧೂರಿ ರಿಸೆಪ್ಷನ್

CINEMA - TV : ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ [VAISHNAVI GOWDA] ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. SEETHA RAMA ಧಾರಾವಾಹಿ ಯಶಸ್ವಿಯಾಗಿ ಮುಕ್ತಾಯಗೊಂಡ ಬಳಿಕ, ವೈಷ್ಣವಿ ಅವರ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿತ್ತು. ಎಲ್ಲ ರೀತಿ ಸಂಪ್ರದಾಯಗಳು ಪಾಲನೆಗೊಂಡು, ಇದೀಗ ಅವರು ಅದ್ಧೂರಿಯಾಗಿ ವಿವಾಹ ಹಾಗೂ ರಿಸೆಪ್ಷನ್ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ.

ಈ ಹಿಂದೆ ಏಪ್ರಿಲ್ 14ರಂದು ವೈಷ್ಣವಿ ಅವರು ಅನಕೂಲ್ ಮಿಶ್ರಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅನಕೂಲ್ ಮೂಲತಃ ಉತ್ತರ ಭಾರತೀಯರಾಗಿದ್ದು, ಏರ್‌ಪೋರ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮದುವೆ ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದೆ.

ಮದುವೆ ನಂತರ ನಡೆದ ರಿಸೆಪ್ಷನ್ ಕಾರ್ಯಕ್ರಮವು ಬಹಳವೇ ವೈಭವದಿಂದ ಕೂಡಿತ್ತು. ಈ ಕಾರ್ಯಕ್ರಮಕ್ಕೆ ಕನ್ನಡದ ಕಿರುತೆರೆ ಲೋಕದ ಅನೇಕ ಖ್ಯಾತ ನಟ ನಟಿಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು. ನಟಿ ಅನುಪಮಾ ಗೌಡ, ನಿವೇದಿತಾ ಗೌಡ, ಇಶಿತಾ, ನೇಹಾ ಗೌಡ, ನಟ ನಿರಂಜನ್ ದೇಶಪಾಂಡೆ ಮತ್ತು ಅವರ ಪತ್ನಿ ಯಶಸ್ವಿನಿ, ನಟ ವಿಜಯ್ ಸೂರ್ಯ ಹಾಗೂ ಅವರ ದಂಪತಿ, ನಟಿ ಅಮೂಲ್ಯ ಮತ್ತು ಸೀತಾರಾಮ ಧಾರಾವಾಹಿಯ ಸಂಪೂರ್ಣ ತಂಡವೂ ಭಾಗಿಯಾಗಿ ವೈಷ್ಣವಿಗೆ ಹೊಸ ಜೀವನದ ಶುಭಾಶಯಗಳನ್ನು ತಿಳಿಸಿದ್ದಾರೆ.

Author:

...
Keerthana J

Copy Editor

prajashakthi tv

share
No Reviews