ದೆಹಲಿ/ಬಾಲಿ : ಇಂಡೋನೇಷ್ಯಾದ ಪ್ರಸಿದ್ಧ ಪ್ರವಾಸಿ ತಾಣ ಬಾಲಿಯ ಸಮೀಪದ ಜ್ವಾಲಾಮುಖಿ ಸ್ಫೋಟದಿಂದಾಗಿ, ದೆಹಲಿಯಿಂದ ಬಾಲಿಗೆ ಹೊರಟಿದ್ದ ಏರ್ ಇಂಡಿಯಾ ಎಐ21145 (AI21145) ವಿಮಾನವನ್ನು ಮಧ್ಯಂತರದಲ್ಲಿ ವಾಪಸ್ ಕರೆಸಿಕೊಳ್ಳಲಾಗಿದ್ದು, ಅದು ಸುರಕ್ಷಿತವಾಗಿ ದೆಹಲಿಯಲ್ಲಿ ಇಳಿದಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಜ್ವಾಲಾಮುಖಿಯ ರಾಖದ ಮೋಡದಿಂದ ಹಾರಾಟಕ್ಕೆ ಅಪಾಯ ಎದುರಾಗಿದ್ದ ಕಾರಣ, ವಿಮಾನವನ್ನು ಹಿಂದಿರುಗಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಏರ್ ಇಂಡಿಯಾ ವಿಮಾನವಲ್ಲದೆ, ಇನ್ನೂ 12ಕ್ಕೂ ಹೆಚ್ಚು ವಿಮಾನಗಳು ಬಾಲಿ ಪ್ರಯಾಣವನ್ನು ರದ್ದು ಮಾಡಿವೆ. ಬಾಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಭಾರೀ ಜ್ವಾಲಾಮುಖಿ ಭೂಕಂಪ ಉಂಟಾಗಿದೆ.
ಬಾಲಿಯ ನುಗುರಾ ರೈ ನಿಲ್ದಾಣ (Ngurah Rai International Airport) ಸದ್ಯಕ್ಕೆ ಭಾಗಶಃ ಮುಚ್ಚಲ್ಪಟ್ಟಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರು ಮೊದಲಿಗೆ ಆತಂಕ ವ್ಯಕ್ತಪಡಿಸಿದರೂ, ವಿಮಾನ ಸುರಕ್ಷಿತವಾಗಿ ಮರಳಿದ ಹಿನ್ನೆಲೆಯಲ್ಲಿ ಎಲ್ಲರೂ ನಿರಾಳರಾಗಿದ್ದಾರೆ. ಏರ್ ಇಂಡಿಯಾ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರಿಗೆ ನೆರವು ಒದಗಿಸಿದ್ದಾರೆ.