MOVIE: ಕೊಡವ ಸೀರೆಯಲ್ಲಿ ಮಿಂಚಿದ ನಟಿ ರೀಷ್ಮಾ ನಾಣಯ್ಯ

ಸಿನಿಮಾ: 

ರೀಷ್ಮಾ ನಾಣಯ್ಯ ಸದ್ಯಕ್ಕೆ ಸ್ಯಾಂಡಲ್‌ ವುಡ್‌ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಬಿಗ್‌ ಸ್ಟಾರ್‌ ಗಳ ಜೊತೆಗೆ ಸಿನಿಮಾ ಮಾಡ್ತಿರೋ ನಟಿ ರೀಷ್ಮಾ ನಾಂಯ್ಯ ಮೂಲತಃ ಕೊಡಗಿನ ಬೆಡಗಿ, ಆದ್ರೆ ಬೆಳೆದಿದ್ದು, ಓದಿದ್ದು, ಇರೋದು ಎಲ್ಲಾ ಬೆಂಗಳೂರಿನಲ್ಲೇ ಆದ್ರೂ ಆಗಾಗ ತನ್ನ ಹುಟ್ಟೂರು ಅವರನ್ನು ಸಳೆಯುತ್ತಲೇ ಇರುತ್ತೇ.

ಕೊಡಗಿನ ಬೆಡಗಿಯಾಗಿ ಗಮನ ಸೆಳೆಯುತ್ತಿದ್ದಾರೆ. ಎಷ್ಟೇ ದೂರ ಬಂದರು ಊರಿನ ನಂಟು ಬಿಡಲಾರದು ಎಂಬ ಮಾತಿದೆ. ಹಾಗೆ ಹುಟ್ಟೂರಿನ ಸಂಸ್ಕೃತಿಯನ್ನು ಮರೆಯುವಂತಿಲ್ಲ. ಇಷ್ಟಪಟ್ಟೆ ಅದನ್ನೆಲ್ಲ ಫಾಲೋ ಮಾಡ್ತಾರೆ. ರೀಷ್ಮಾ ನಾಣಯ್ಯ ಕೂಡ ಊರಿಗೆ ಹೋಗಿರೋದು. ಅಲ್ಲದೆ ಅಲ್ಲಿನ ಬಹುಮುಖ್ಯವಾದ ಸಂಪ್ರದಾಯವನ್ನು ಹೊತ್ತು ಮೆರೆದಿದ್ದಾರೆ.

ಸದ್ಯ ರೀಷ್ಮಾ ನಾಣಯ್ಯ ತಮ್ಮ ಊರಿನಲ್ಲಿ ಬೀಡು ಬಿಟ್ಟಿದ್ದು. ಮಡಿಕೇರಿ ಲೈಫ್‌ ಎಂಜಾಯ್‌ ಮಾಡ್ತಿದ್ದಾರೆ. ಇನ್ನು ಕೊಡವ ಸಂಪ್ರದಾಯದಂತೆ ಸೀರೆಯುಟ್ಟು ಕಂಗೊಳಿಸುತ್ತಿದ್ದು, ತಮ್ಮ ಪೋಟೋಗಳನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೋಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Author:

...
Keerthana J

Copy Editor

prajashakthi tv

share
No Reviews