Cannes Film Festival 2025 : ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮಿಂಚಿದ ನಟಿ ದಿಶಾ ಮದನ್

ಸಿನಿಮಾ - ಟಿವಿ : ಕನ್ನಡ ಕಿರುತೆರೆಯಲ್ಲಿ ದಿಶಾ ಮದನ್‌ ಅವರು ಫೇಮಸ್‌ ಆಗಿದ್ದಾರೆ. ಇವರು ಡ್ಯಾನ್ಸಿಂಗ್‌ ಸ್ಟಾರ್‌ ರಿಯಾಲಿಟಿ ಶೋನಲ್ಲಿ ಜನಮೆಚ್ಚುಗೆಯನ್ನು ಪಡೆದಿದ್ದರು.  ದಿಶಾ ಮದನ್‌ ಅವರು ಅಪ್ಪಟ ಕನ್ನಡದ ನಟಿ. ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಬಣ್ಣದ ಲೋಕದಲ್ಲಿ ಗುರುತಿಸಿಕೊಂಡ ಅವರು ನಂತರ ಇವರು ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದರು.

ಅಲ್ಲದೇ ಇದೀಗ ಕಾನ್‌ ಫಿಲ್ಮ್‌ ಫೆಸ್ಟಿವಲ್‌ ತುಂಬ ಅದ್ದೂರಿಯಾಗಿ ನಡೆಯುತ್ತಿದೆ. ಇದರಲ್ಲಿ ಕನ್ನಡದ ನಟಿಯಾದ ದಿಶಾ ಮದನ್‌ ಅವರು ಭಾಗಿಯಾಗಿದ್ದಾರೆ. ಬೇರೆ ಬೇರೆ ದೇಶಗಳಿಂದ ಬಂದಿರುವ ಸೆಲೆಬ್ರಿಟಿಗಳ ನಡುವೆ ಈ ಕನ್ನಡಿತಿ ಕೂಡ ಅವರಂತೆ ಮಿಂಚುತ್ತಿದ್ದಾರೆ. ದಿಶಾ ಮದನ್‌ ಅವರ ಸೀರೆಯು ವಿಶೇಷವಾಗಿದೆ. ಅವರು ಕಾಂಚಿವರಂ ಸೀರೆಗೆ ದಿಶಾ ಅವರು ಆಧುನಿಕಯ ಸ್ಪರ್ಶ ನೀಡಿದ್ದಾರೆ. ಅಲ್ಲದೇ ದಶಕಗಳಷ್ಟು ಹಳೆಯದಾದ ಆಭರಣಗಳನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ನಾನು ಕನ್ನಡ ಚಿತ್ರರಂಗದವಳು ಎಂದು ದಿಶಾ ಮದನ್‌ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕಾನ್‌ ಚಿತ್ರೋತ್ಸವದಲ್ಲಿ ಪೋಸ್‌ ನೀಡುವ ಅವಕಾಶ ಪಡೆದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳನ್ನು ಎಂದು  ತಿಳಿಸಿದ್ದಾರೆ.

Author:

...
Keerthana J

Copy Editor

prajashakthi tv

share
No Reviews