SRIDHAR NAYAK : ನಟ ಶ್ರೀಧರ್‌ ನಾಯಕ್‌ ನಿಧನ

SERIAL ACTOR : ಜನಪ್ರಿಯ ಧಾರಾವಾಹಿ ಮತ್ತು ಚಿತ್ರ ನಟ 47 ವರ್ಷದ ಶ್ರೀಧರ್ ನಾಯಕ್ ನಿನ್ನೆ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರು ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಅವರನ್ನು ದಾಖಲಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಉಸಿರೆಳೆದಿದ್ದಾರೆ.

ಇದೀಗ, ಅಂತಿಮ ದರ್ಶನಕ್ಕಾಗಿ ಅವರ ಮೃತದೇಹವನ್ನು ಆಸ್ಪತ್ರೆಯಲ್ಲಿ ಇಡಲಾಗಿದೆ. ಇನ್ನು ಶ್ರೀಧರ್‌ ‘ಪಾರು’ ಹಾಗೂ ‘ವಧು’ ಧಾರಾವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿತ್ತು. ಜೊತೆಗೆ ‘ಮ್ಯಾಕ್ಸ್’ ಚಿತ್ರದಲ್ಲಿಯೂ ನಟಿಸಿದ್ದರು.

ಅವರ ಆರೋಗ್ಯ ಹದಗೆಟ್ಟಿದ್ದು ಹಾಗೂ ತೀವ್ರ ಬದಲಾವಣೆ ಕಂಡು ಅನೇಕರು ಸಹಾಯಕ್ಕಾಗಿ ಮುಂದಾಗಿದ್ದರು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಇನ್ನು ಶ್ರೀಧರ್ ನಾಯಕ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ರಂಗ ಶೋಕ ವ್ಯಕ್ತಪಡಿಸಿದೆ.

 

Author:

...
Keerthana J

Copy Editor

prajashakthi tv

share
No Reviews