ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ನಮ್ಮ ಪ್ರೀತಿಯ ರಾಮು ಫೆಬ್ರವರಿ 14 ರಂದು ರೀರಿಲೀಸ್ ಮಾಡುತ್ತಿದೆ. ಈಗಾಗಲೇ ಫೆಬ್ರವರಿ 14 ಕ್ಕೇ ಮರುಬಿಡುಗಡೆ ಮಾಡಲು ತಯಾರಿ ನಡೆದಿದೆ. ಈಗಾಗಲೇ ಸಿನಿಮಾ 100 ಥೀಯೆಟರ್‌ಗಳಲ್ಲಿ ಪ್ರದರ್ಶನ ಕಾಣಲು ಸಿದ್ದವಾಗಿದೆ. ಇನ್ನೂ 30 ಥೀಯೆಟರ್ ಸೇರ್ಪಡೆ ಆಗುವ ನಿರೀಕ್ಷೆ ಇದೆ. ಎರಡು ದಶಕಗಳ ಹಿಂದಿನ ಚಿತ್ರವನ್ನು ಡಿಜಿಟಲ್ ರೂಪದಲ್ಲಿ ಡಿಟಿಎಸ್ ಸೌಂಡ್ ಜೊತೆ ಈ ವಾರ ತೆರೆಗೆ ತರಲಾಗುತ್ತಿದೆ.
ಫ್ಯಾಮಿಲಿ ಕೂತು ನೋಡುವ ಸಿನಿಮಾ ಇದಾಗಿದ್ದು ಹೈದರಾಬಾದ್ ನಲ್ಲೂ ಸಿನಿಮಾ ಪ್ರದರ್ಶನವಾಗುತ್ತಿದೆ. ಅಲ್ಲದೇ ಬುಕ್ ಮೈ ಶೋನಲ್ಲಿ ದರ್ಶನ್ ಸಿನಿಮಾಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬವಿದ್ದು , ಆದರೆ ದರ್ಶನ್ ತಮ್ಮ ಅನಾರೋಗ್ಯದ ಕಾರಣ ದರ್ಶನ್ ಜನ್ಮದಿನವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ವಿಡಿಯೋವನ್ನು ಹಂಚಿಕೊಂಡ್ಡಿದ್ದರು, ಹೀಗಾಗಿ ದರ್ಶನ್ ಅಭಿಮಾನಿಗಳು ಬೇಸರಗೊಂಡಿದ್ದರು, ಆದರೀಗ ನಮ್ಮ ಪ್ರೀತಿಯ ರಾಮು ಚಿತ್ರ ರೀರಿಲೀಸ್ ವಿಷಯ ಫ್ಯಾನ್ಸ್ ಗೆ ಖುಷಿಕೊಟ್ಟಿದೆ.
ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಹೈದ್ರಾಬಾದ್ ನ 3 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಹೀಗಾಗಿ ಬುಕ್ ಮೈ ಶೋನಲ್ಲಿ ದರ್ಶನ್ ಸಿನಿಮಾಗೆ ಭಾರಿ ಬೇಡಿಕೆ ಶುರುವಾಗಿದೆ. ಈ ಸಿನಿಮಾ ನವೆಂಬರ್ 14 2003 ರಲ್ಲಿ ತೆರೆಕಂಡಿತ್ತು, ಈ ಸಿನಿಮಾಗೆ 22 ವರ್ಷಗಳ ಬಳಿಕ ಮರುಬಿಡುಗಡೆ ಆಗುತ್ತಿದ್ದು, ಜನ ಯಾವ ರೀತಿ ಸಿನಿಮಾವನ್ನು ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರದ ಜೊತೆಗೆ ದರ್ಶನ್ ನಟನೆಯ 'ಚಿಂಗಾರಿ' ಚಿತ್ರವನ್ನು ಕೂಡ ಈ ವಾರ ರಾಜ್ಯದಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.