ABBEY FAlls: ಅಬ್ಬಬ್ಬಾ ಅಬ್ಬೆ ಫಾಲ್ಸ್‌ ಸೌಂದರ್ಯ ಹೇಗಿದೆ ಗೊತ್ತಾ

Abbey falls
Abbey falls
ಕೊಡಗು

ಕರ್ನಾಟಕದ ಇತದರ ಜಲಪಾತಗಳಿಗೆ ಹೋಲಿಸಿದರೆ ಅಬ್ಬಿ ಜಲಪಾತದ ಎತ್ತರವು ಹೆಚ್ಚು ಇಲ್ಲವಾದರೂ ಅಬ್ಬೆ ಜಲಪಾತವು ವಿಶಾಲವಾದ ಧುಮುಕುವ ಪ್ರದೇಶವನ್ನು ಹೊಂದಿದ್ದು, ಇದು ನೋಡುಗರಿಗೆ ಮತ್ತು ಪ್ರವಾಸಿಗರಿಗೆ ಸುಂದರ ತಾಣವಾಗಿದೆ ಮತ್ತು ಮಡಿಕೇರಿ ನಗರಕ್ಕೆ ಹತ್ತಿರದಲ್ಲಿದ್ದು ಸುಲಭವಾಗಿ ಹೋಗಬಹುದು.

ಅಬ್ಬೆ ಜಲಪಾತ ಜಲಪಾತವು ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ತೆರೆದಿರುತ್ತದೆ. ಈ ಜಲಪಾತವನ್ನು ಪ್ರವೇಶಿಸಲು ಖಾಸಗಿ ಕಾಫಿ ತೋಟಗಳ ಮೂಲಕ ಹಾದು ಹೋಗಬೇಕು ಹಾಗೂ ಎತ್ತರದಿಂದ ಅಬ್ಬೆ ಜಲಪಾತದ ನೋಟವನ್ನು ಆನಂದಿಸಲು ತೂಗು ಸೇತುವೆ ಲಭ್ಯವಿದೆ. ಅಬ್ಬೆ ಜಲಪಾತದಲ್ಲಿ ಸ್ನಾನ ಮಾಡುವುದಕ್ಕೆ ಅಥವಾ ಈಜಾಡುವುದಕ್ಕೆ ಅವಕಾಶವಿಲ್ಲ, ಸೀಮಿತ ಪಾರ್ಕಿಂಗ್ ಲಭ್ಯವಿದೆ.

ಅಬ್ಬೆ ಜಲಪಾತಕ್ಕೆ ಹತ್ತಿರದಲ್ಲಿ ಭೇಟಿ ನೀಡುವ ಸ್ಥಳಗಳು: ತಲಕಾವೇರಿ(50ಕಿ.ಮೀ.), ರಾಜ ಸೀಟ್(7ಕಿ.ಮೀ.), ದುಬಾರೆ ಆನೆ ಶಿಬಿರ(40ಕಿ.ಮೀ.), ಸುವರ್ಣ ದೇವಾಲಯ(38ಕಿ.ಮೀ.), ಕಾವೇರಿ ನಿಸರ್ಗಧಾಮ(31ಕಿ.ಮೀ.) ಇವು ಕೊಡಗು ಜಿಲ್ಲೆಯ ಕೆಲವು ಜನಪ್ರಿಯ ಆಕರ್ಷಣೆಗಳನ್ನು ಅಬ್ಬೆ ಜಲಪಾತದ ಪ್ರವಾಸದ ಜೊತೆಗೆ ಭೇಟಿ ನೀಡಬಹುದು.

ಅಬ್ಬೆ ಜಲಪಾತವು ಮಡಿಕೇರಿ ಪಟ್ಟಣದಿಂದ 6 ಕಿ.ಮೀ. ದೂರದಲ್ಲಿದೆ. ಮಡಿಕೇರಿಯು ಬೆಂಗಳೂರು ನಗರದಿಂದ 250 ಕಿ.ಮೀ. ಮತ್ತು ಮಂಗಳೂರಿನಿAದ 140 ಕಿ.ಮೀ. ದೂರದಲ್ಲಿದೆ. ಕೇರಳದ ಕಣ್ಣೂರು ಅಂತರಾಷ್ಟಿçÃಯ ವಿಮಾನ ನಿಲ್ದಾಣವು ಮಡಿಕೇರಿಗೆ ಹತ್ತಿರದಲ್ಲಿದೆ(90ಕಿ.ಮೀ.). ಮಡಿಕೇರಿಗೆ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಿAದ ಅತ್ತಯತ್ತಮ ಬಸ್ ಸಂಪರ್ಕವು ಇದೆ. ಒಮ್ಮೊಮ್ಮೆ ಮಡಿಕೇರಿಯಲ್ಲಿ ಮತ್ತು ಕೊಡಗಿನಲ್ಲಿ ವಿವಿಧ ಆಕರ್ಷಣಿಯ ಸ್ಥಳಗಳನ್ನು ನೋಡಲು ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆಯಬಹುದು.

ಅಬ್ಬೆ ಜಲಪಾತದ ಹತ್ತಿರದಲ್ಲಿ ಉಳಿಯಲು ಸ್ಥಳಗಳು; ಮಡಿಕೇರಿ ಪಟ್ಟಣ ಮತ್ತು ಕೊಡಗು ಜಿಲ್ಲೆಯು ಹಲವಾರು ಹೋಂಸ್ಟೇಗಳು, ಬಜೆಟ್ ಹೋಟೆಲ್‌ಗಳು ಮತ್ತು ಐಷಾರಾಮಿ ರೆಸಾರ್ಟ್ಗಳನ್ನು ಹೊಂದಿದೆ.

 

Author:

...
Editor

ManyaSoft Admin

Ads in Post
share
No Reviews