ಸಿಂಪಲ್ ಆಗಿ ರುಚಿಕರವಾದ ಗೋಧಿ ಬಿಸ್ಕೆಟ್ ಮಾಡುವ ವಿಧಾನ

ಗೋಧಿ ಬಿಸ್ಕೆಟ್‌
ಗೋಧಿ ಬಿಸ್ಕೆಟ್‌
ಆರೋಗ್ಯ-ಜೀವನ ಶೈಲಿ

ರುಚಿಕರವಾದ ಗೋಧಿ ಬಿಸ್ಕೆಟ್‌ ಮಾಡಲು ಬೇಕಾಗುವ ಸಾಮಗ್ರಿಗಳು

*ಎಣ್ಣೆ – 1/2 ಕಪ್‌

*ಸಕ್ಕರೆ ಪುಡಿ – 1/2 ಕಪ್‌

*1 ಕಪ್‌ – ಗೋದಿ ಹೆಟ್ಟು

*1/2 ಕಪ್‌ – ಕಡಲೇಹಿಟ್ಟು

*ಸ್ವಲ್ಪ ಹಾಲು

 

ರುಚಿಕರವಾದ ಗೋಧಿ ಬಿಸ್ಕೆಟ್ ಮಾಡುವ ವಿಧಾನ...

ಒಂದು ಬೌಲ್‌ಗೆ  ಅರ್ಧ ಕಪ್‌ ಎಣ್ಣೆ, ಅರ್ಧ ಕಪ್‌ ಸಕ್ಕರೆ ಪುಡಿ, ಸೇರಿಸಿ ಚೆನ್ನಾಗಿ ೫-೬ ನಿಮಿಷ ಮಿಶ್ರಣ ಮಾಡಿ. ನಂತರ ಒಂದು ಕಪ್‌ ಗೋಧಿ ಹಿಟ್ಟು, ಅರ್ಧ ಕಪ್‌ ಕಡಲೇ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ. ನಂತರ ಹಾಲು ಹಾಕಿ ನಾದಿಕೊಳ್ಳಿ.

ನಂತರ ಇದನ್ನು ತುಸು ದಪ್ಪಗೆ ಲಟ್ಟಿಸಿಕೊಂಡು ಫೋರ್ಕ್ ನ ಸಹಾಯದಿಂದ ಇದರ ಮೇಲೆ ನಿಧಾನಕ್ಕೆ ಚುಚ್ಚಿ. ಚಿಕ್ಕ ಚಿಕ್ಕ ತೂತಿನ ಹಾಗೇ ಕಾಣಿಸುತ್ತದೆ. ನಂತರ ಚೌಕಾಕಾರದಲ್ಲಿ ಕತ್ತರಿಸಿ. ಇದನ್ನು ಬೇಕಿಂಗ್ ಟ್ರೆಯಲ್ಲಿ ಇಟ್ಟು ಒವೆನ್ ನಲ್ಲಿ 20 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ. ಇದು ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಡಿ.

Author:

...
Editor

ManyaSoft Admin

Ads in Post
share
No Reviews