protestತುಮಕೂರು
ತಾಲೂಕಿನ ಕಡಬ ಹೋಬಳಿ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಡೆನಹಳ್ಳಿ ನಿವಾಸಿ ರಾಘವೇಂದ್ರ ಅವರ ಕುಟುಂಬ ತಾಲ್ಲೂಕು ಪಂಚಾಯತಿ ಮುಂಭಾಗ ಪ್ರತಿಭಟನೆ ನಡೆಸಿದರು. ಸಂತ್ರಸ್ತ ರಾಘವೇಂದ್ರ ಮಾತನಾಡಿ ಸುಮಾರು ವರ್ಷಗಳಿಂದ ಬಾಡೆನಹಳ್ಳಿ ಗ್ರಾಮದ ನೀವೇಶನ ಸಂಖ್ಯೆ 05 ರಲ್ಲಿ ಸುಮಾರು ವರ್ಷಗಳಿಂದ ವಾಸವಾಗಿದ್ದು ನಾವು ಅನುಭವದಲ್ಲಿದ್ದೇವೆ.
ಹಾಗೂ ಕೂಲಿ ನಾಲಿ ಮಾಡಿಕೊಂಡು ಪುಟ್ಟದೊಂದು ಮನೆಯ ನಿರ್ಮಿಸಿಕೊಂಡು ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದೇವೆ. 2022ನೇ ಸಾಲಿನಲ್ಲಿ ಅಕ್ರಮ ಸಕ್ರಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದೇನೆ ಆದರೆ ಅಧಿಕಾರಿಗಳು ನನ್ನ ಬಳಿ ಮೂಲ ದಾಖಲಾತಿ ಇಲ್ಲವೆಂದು. ನಾನು ಇದ್ದಂತಹ ವಾಸದ ಮನೆಯನ್ನು ತೆರವುಗೊಳಿಸಿದ್ದಾರೆ
ಇದ್ದ ಒಂದು ಸೂರನ್ನು ಕಳೆದುಕೊಂಡು ನಮ್ಮ ಕುಟುಂಬವು ಬೀದಿಗೆ ಬಿದ್ದಂತಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಚೇರಿಯ ಮುಂಭಾಗ ಪ್ರತಿಭಟನೆಯಲ್ಲಿ ಕಣ್ಣೀರಿಟ್ಟರು. ಹಾಗೂ ದಂಪತಿಗಳಿಬ್ಬರು ಪೆಟ್ರೋಲ್ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಕಾಶ್ ಮಾತನಾಡಿ ಸಂತ್ರಸ್ತ ರಾಘವೇಂದ್ರ ಕುಟುಂಬಕ್ಕೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು ಬರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ ಗೋಪಿನಾಥ್ ಪಿ ಎಸ್ ಐ ಸುನಿಲ್ ಕುಮಾರ್, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಕೆ ಆರ್ ವೆಂಕಟೇಶ್, ಮಾರಶೆಟ್ಟಿಹಳ್ಳಿ ಗ್ರಾಪಂ ಪಿಡಿಒ ತನುಜಾ ಬೆನಕಟ್ಟೆ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.