ANDRA PRADESH: ಆಂಧ್ರದಲ್ಲಿ ದೇವಾಲಯದ ಗೋಡೆ ಕುಸಿದು 7 ಮಂದಿ ದಾರುಣ ಸಾವು

ರಾಜ್ಯ: 

ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ನಗರಗಳು ತತ್ತರಿಸಿ ಹೋಗಿವೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದೆಲ್ಲೆಡೆ ಮಳೆಯ ಅಬ್ಬರ ಕೊಂಚ ಜೋರಾಗಿಯೇ ಇದೆ. ಈ ಮೆಳೆಯ ಅವಾಂತರಕ್ಕೆ ಒಂದು ಕಡೆ ಮನೆಗಳು, ಮರಗಳು ಕುಸಿದು ಬಿದ್ರೆ, ಮತ್ತೊಂದು ಕಡೆ ಸಿಡಿಲು ಬಡಿತಕ್ಕೆ ಜನ-ಜಾನುವಾರುಗಳು ಸಾವುಗಳ ಸಂಭವಿಸುತ್ತಿವೆ. ಇನ್ನು ನಿನ್ನೆ ಆಂಧ್ರ ಪದೇಶದಲ್ಲಿ ಸುರಿದ ಭಾರೀ ಮಳೆಗೆ ದೇವಾಲಯದ ಗೋಡೆ ಕುಸಿತು 7 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ನಿನ್ನೆ ಆಂಧ್ರದಲ್ಲಿ ಮಳೆಯ ಅಬ್ಬರ ಕೊಂಚ ಹೆಚ್ಚಾಗಿಯೇ ಇತ್ತು. ಇತ್ತ ವಿಶಾಖಪಟ್ಟಣದ ಶ್ರೀ ವರಾಹ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಚಂದನೋತ್ಸವ ನಡೆಯುತ್ತಿತ್ತು. ಈ ಉತ್ಸವದ ನಡುವೆಯೇ ದೇವಸ್ಥಾನದ ಗೋಡೆ ಕುಸಿದಿದೆ. ಈ ಗೋಡೆ ಕುಸಿತದಲ್ಲಿ ಸುಮಾರು 7 ಮಂದಿ ಸಾವನ್ನಪಿದ್ರೆ. ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ರು. ಎನ್‌ಡಿಆರ್‌ಎಫ್ ಮತ್ತು ಅಧಿಕಾರಿಗಳ ತಂಡ ರಕ್ಷಣಾ ಕಾರ್ಯಾಕ್ಕೆ ಮುಂದಾಗಿದ್ರು. ಇನ್ನು ಘಟನೆಯ ಬಗ್ಗೆ ಆಂಧ್ರಪ್ರದೇಶದ ಗೃಹ ಸಚಿವ ವಿ.ಅನಿತಾ ಅವರು ಪ್ರತಿಕ್ರಿಯಿಸಿ, "ಸಿಂಹಾಚಲಂ ದೇವಾಲಯದ ಗೋಡೆ ಕುಸಿತ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಮಣ್ಣು ಸಡಿಲಗೊಂಡಿದ್ದರಿಂದ ಘಟನೆ ಉಂಟಾಗಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ಅಧಿಕಾರಿಗಳ ತಂಡಗಳು ರಕ್ಷಣೆಯಲ್ಲಿ ತೊಡಗಿವೆ. ಗಾಯಾಳುಗಳನ್ನು ವಿಶಾಖಪಟ್ಟಣ ಕೆಜಿಹೆಚ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹೆಚ್ಚು ಮಳೆಯಾಗಿದ್ದು, ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಇದು ದುರದೃಷ್ಟಕರ ಘಟನೆ" ಎಂದು ತಿಳಿಸಿದ್ದಾರೆ.

ಈ ಘಟನೆಯು ಇಂದು ಬೆಳಗಿನ ಜಾವ 2:30ರ ಸುಮಾರಿಗೆ ಸಂಭವಿಸಿದೆ ಎನ್ನಲಾಗಿದೆ. ಕುಸಿದಿರುವ ಗೋಡೆಯು ಕೇವಲ 20 ದಿನ ಹಿಂದೆ ಕಟ್ಟಲಾಗಿತ್ತು ಎನ್ನಲಾಗಿದೆ. ಆದ ಕಾರಣ ಧಾರಾಕಾರವಾಗಿ ಸುರಿದ ಮಳೆಗೆ ಕುಸಿತಗೊಂಡಿದೆ ಎನ್ನಲಾಗಿದೆ.

Author:

...
Keerthana J

Copy Editor

prajashakthi tv

share
No Reviews