ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮೆಚ್ಚಿನ ಆಟಗಾರ, ಕ್ರಿಕೆಟ್ ಲೋಕದ ಮಿಸ್ಟರ್ 360 ಡಿಗ್ರಿ ಎಬಿ ಡಿವಿಲಿಯರ್ಸ್ ಇಂದು ತಮ್ಮ ೪೧ ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಐಪಿಲ್ ತಂಡದಲ್ಲಿ ಆರ್‌ಸಿಬಿ ತಂಡದ ಬೆನ್ನೆಲುಬಾಗಿ ಎಬಿಡಿ ತಮ್ಮ 360 ಡಿಗ್ರಿ ಬ್ಯಾಟಿಂಗ್ ಅನ್ನು ಅಭಿಮಾನಿಗಳು ಇಂದಿಗೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಎಬಿಡಿ ವಿಲಿಯರ್ಸ್ ಮೂಲತಃ ದಕ್ಷಿಣ ಆಫ್ರಿಕಾದ ಆಟಗಾರ. ಆದರೆ ಇವರಿಗೆ ವಿಶ್ವದಲ್ಲೆಡೆ ಹೆಚ್ಚು ಫ್ಯಾನ್ಸ್ ಇದ್ದಾರೆ. ಎಬಿಡಿ ಅವರ ಎರಡನೇ ತವರು ಎಂದು ಕರೆಯುವುದು ಬೆಂಗಳೂರನ್ನು. ಆರ್‌ಸಿಬಿ ತಂಡದ ಪರ ಆಡಿ, ಅಪಾರ ಅಭಿಮಾನಿಗಳನ್ನು ಹೊಂದಿರುವ ಎಬಿಡಿ ಆಟಕ್ಕೆ ಆರ್‌ಸಿಬಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಸಾಮಾನ್ಯವಾಗಿ ಎಬಿಡಿ ಎಂದು ಕರೆಯಲ್ಪಡುವ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ ಫೆಬ್ರವರಿ 17 ರಂದು 41 ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಎಬಿ ಡಿವಿಲಿಯರ್ಸ್ ಅವರ ಕಾಲದ ಅತ್ಯಂತ ಸ್ಫೋಟಕ ಬ್ಯಾಟ್ಸ್‌ಮನ್ ಅವರ ನಿವೃತ್ತಿಯ ನಂತರ ಜಗತ್ತು ಅವರ ಬ್ಯಾಟಿಂಗ್ ಅನ್ನು ಬಹಳಷ್ಟು ನೆನಪಿಸಿಕೊಳ್ಳುತ್ತಿದೆ. ಎಬಿ ಡಿವಿಲಿಯರ್ಸ್ ತನ್ನ ವಿಶಿಷ್ಟವಾದ ಹೊಡೆತಗಳನ್ನು ಆಡಲು ಹೆಸರುವಾಸಿ. ಅದಕ್ಕಾಗಿಯೇ ಅಭಿಮಾನಿಗಳು ಅವರನ್ನು ಮಿಸ್ಟರ್ 360 ಎಂದು ಕರೆಯುತ್ತಾರೆ.
ಆರ್‌ಸಿಬಿ ತಂಡದ ಆಪತ್‌ಬಾಂಧವ ಎಂದೇ ಕರೆಸಿಕೊಳ್ಳುವ ಎಬಿಡಿ, ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರೂ ಸಹ ತಂಡಕ್ಕೆ ಆಧಾರವಾಗಬಲ್ಲ ಪ್ಲೇಯರ್.. ತಮ್ಮ ಬಿರುಗಾಳಿಯ ಬ್ಯಾಟಿಂಗ್‌ನಿಂದಲೇ ಆರ್‌ಸಿಬಿ ಪರ ಮಿಂಚಿದ ಆಟಗಾರ. ಎಬಿಡಿವಿಲಿಯರ್ಸ್ ತಮ್ಮ ವೃತ್ತಿಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದಾರೆ. ಅನೇಕ ವಿಶ್ವ ದಾಖಲೆಗಳನ್ನು ಕೂಡ ಮಾಡಿದ್ದಾರೆ. ಆಫ್ರಿಕಾ ತಂಡದ ನಾಯಕತ್ವ ವಹಿಸಿಕೊಂಡು ಅದೇಷ್ಟೋ ಐತಿಹಾಸಿಕ ಸರಣಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.