2ನೇ ದಿನ ದಾಖಲೆ ಬರೆದ ಮಹಾ ಕುಂಭಮೇಳ: 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ

kumbamela 2025
kumbamela 2025
ದೇಶ

ಪ್ರಯಾಗ್‌ರಾಜ್‌: ಮಹಾ ಕುಂಭಮೇಳ ಕೋಟ್ಯಂತರ ಭಕ್ತರನ್ನ ಸೆಳೆಯುತ್ತಿರೋ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಸಂಗಮ. ಪ್ರಯಾಗ್‌ರಾಜ್‌ ಮಿನಿ ಭಾರತದಂತೆ ಕಾಣಿಸ್ತಿದೆ. ಊಹೆಗೂ ಮೀರಿ ಭಕ್ತ ಸಾಗರವೇ ಹರಿದು ಬಂದಿದೆ. 144 ವರ್ಷಗಳಿಗೊಮ್ಮೆ ಬರೋ ಮಾಹಾಕುಂಭಮೇಳ ಆ ಭೋಲೇನಾಥನ ಆರಾಧನೆಯಲ್ಲಿ ತೇಲಿಸುತ್ತಿದೆ.

3.5 ಕೋಟಿ ಭಕ್ತರು ಪವಿತ್ರ ಸ್ನಾನ

ಮಂಗಳವಾರ ಮಕರ ಸಂಕ್ರಾಂತಿ. ಹೀಗಾಗಿ 2 ದಿನ ಸಂಗಮದಲ್ಲಿ ಬರೋಬ್ಬರಿ 4 ಕೋಟಿ ಭಕ್ತರು ಶಾಹಿ ಸ್ನಾನದ ನಿರೀಕ್ಷೆ ಇತ್ತು. 45 ದಿನಗಳ ಕಾಲ ನಡೆಯುವ ಮಹಾಕುಂಭಮೇಳದಲ್ಲಿ ದೇಶ, ವಿದೇಶಗಳಿಂದ 45 ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಮಹಾಕುಂಭ ಮೇಳ ನಡೆಯುವ ಜಾಗವನ್ನೇ ಉತ್ತರ ಪ್ರದೇಶದ 76ನೇ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದೆ. ಇದರ ಮಧ್ಯೆ ಮಹಾ ಕುಂಭವೇಳದ 2ನೇ ದಿನವಾದ ಮಕರ ಸಂಕ್ರಾಂತಿ ಅಂಗವಾಗಿ ಸಂತರು ಸಾಧುಗಳು ಸೇರಿದಂತೆ ಸುಮಾರು 3.5 ಕೋಟಿ ಭಕ್ತರು ಪ್ರಯಾಗ್​ರಾಜ್​ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ತ್ರಿವೇಣಿ ಸಂಗಮದ ಬಳಿ 60 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿ

ಹರಹರ ಮಹಾದೇವ್​​, ಜೈಶ್ರೀರಾಮ್​ ಮತ್ತು ಜೈ ಗಂಗಾ ಮಾತೆ ಎಂಬ ಘೋಷಣೆ ಮೂಲಕ ಕೋಟ್ಯಾಂತರ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ತ್ರಿವೇಣಿ ಸಂಗಮದ ಬಳಿ 60 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ ಅಂತ ಯುಪಿ ಗೃಹ ಇಲಾಖೆ ಕಾರ್ಯದರ್ಶಿ ಸಂಜಯ್​ ಪ್ರಸಾದ್​​ ತಿಳಿಸಿದ್ದಾರೆ.

ಧಾರ್ಮಿಕ ಸಂಗಮ ಭಕ್ತರನ್ನ ಸೆಳೆಯೋದು ಮಾತ್ರವಲ್ಲ ಉತ್ತರ ಪ್ರದೇಶದ ಆರ್ಥಿಕತೆ ನೆಕ್ಸ್ಟ್​ ಲೆವೆಲ್​ಗೆ ಕೊಂಡೊಯ್ಯುತ್ತಿದೆ. ಮಹಾಕುಂಭಮೇಳ ಉತ್ತರ ಪ್ರದೇಶದ ಆರ್ಥಿಕತೆಗೆ ಬಲ ತುಂಬಲಿದೆ ಅಂತ ಅಂದಾಜಿಸಲಾಗಿದೆ. ಯುಪಿ ಸರ್ಕಾರ ಬರೋಬ್ಬರಿ 25 ಸಾವಿರ ಕೋಟಿ ರೂಪಾಯಿಗಳನ್ನ ಖರ್ಚು ಮಾಡ್ತಿದೆ. ಆದ್ರೆ ಬರೋಬ್ಬರಿ 2 ಲಕ್ಷ ಕೋಟಿ ರೂಪಾಯಿ ಆದಾಯದ ನಿರೀಕ್ಷೆಯನ್ನೂ ಹೊಂದಿದೆ. ಜೊತೆಗೆ ಕೇಂದ್ರಕ್ಕೂ ಆರ್ಥಿಕ ಲಾಭ ನೀಡ್ತಿದೆ. ಭಕ್ತಾದಿಗಳ ಓಡಾಟಕ್ಕೆ ಸುಮಾರು 13 ಸಾವಿರ ವಿಶೇಷ ರೈಲಿನ ಟ್ರಿಪ್​ ನೀಡಿದೆ.

Author:

...
Editor

ManyaSoft Admin

Ads in Post
share
No Reviews