ಕೊರಟಗೆರೆ :
ಕೊರಟಗೆರೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ೧೫ ದಿನಗಳ ಪೋಷಣ್ ಪಖ್ವಾಡ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಕೊರಟಗೆರೆ ಪಟ್ಟಣದ ಗಂಗಮ್ಮ ದೇವಾಲಯದ ಬಳಿ ಇರುವ ಅಂಗನವಾಡಿ ಕೇಂದ್ರದಲ್ಲಿ ಈ ಅಭಿಯಾನವನ್ನು ಉದ್ಘಾಟಿಸಲಾಯಿತು. ಅಂಗನವಾಡಿ ಶಿಕ್ಷಕಿಯರ ಸಮ್ಮಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರು, ತಾಯಂದಿರು ಸೇರಿದಂತೆ ಹಲವರು ಭಾಗಿಯಾಗಿದ್ದರು.
ಕೊರಟಗೆರೆ ಸಿಡಿಪಿಓ ಅಂಬಿಕಾ ಮಾತನಾಡಿ, ಇಂದಿನಿಂದ 15 ದಿನಗಳ ಕಾಲ ಪ್ರತಿ ಅಂಗನವಾಡಿಗಳಲ್ಲಿ ಈ ಅಭಿಯಾನ ನಡೆಯಲಿದ್ದು, ಮಗುವಿನ ಜನನದ ಮೊದಲ ಸಾವಿರ ದಿನಗಳ ಬಗ್ಗೆ ಒತ್ತು ಕೊಡೋದರ ಬಗ್ಗೆ ಪೋಷಕರಿಗೆ ತಿಳುವಳಿಕೆ ನೀಡಲಾಗುವುದು. ಅಪೌಷ್ಠಿಕತೆಯನ್ನು ಹೋಗಲಾಡಿಸೋದರ ಬಗ್ಗೆ ತಿಳುವಳಿಕೆ ನೀಡೋದು, ಹಾಗೇನೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅಪೌಷ್ಠಿಕತೆಯಿಂದ ತಾಯಿ ಮಗುವಿನ ಆರೋಗ್ಯವನ್ನು ಹೇಗೆ ಕಾಪಾಡಬೇಕು ಎನ್ನುವ ಬಗ್ಗೆ ಮಾಹಿತಿಯಿರುವ ಕಾರ್ಯಕ್ರಮ ಇದಾಗಿದೆ ಅಂತಾ ತಿಳಿಸಿದರು.
ಪಟ್ಟಣ ಪಂಚಾಯ್ತಿ ಸದಸ್ಯೆ ಭಾಗ್ಯಮ್ಮ ಮಾತನಾಡಿ, ಅಂಗನವಾಡಿಗೆ ಬರುವ ಹತ್ತಾರು ಮಕ್ಕಳಿಗೆ ತಾಯಿಯಾಗಿ ಕೆಲಸ ಮಾಡುವ ಅಂಗನವಾಡಿ ಶಿಕ್ಷಕಿಯರಿಗೆ ನಾವೆಲ್ಲರೂ ಅಭಿನಂದನೆ ತಿಳಿಸಬೇಕು, ಯಾಕಂದೆರೆ ನಾವು ಮನೆಯಲ್ಲಿ ಒಂದು ಅಥವಾ ಎರಡು ಮಕ್ಕಳನ್ನೇ ನೋಡಿಕೊಳ್ಳೋದು ಕಷ್ಟ. ಅಂತದ್ರಲ್ಲಿ ಅಂಗನವಾಡಿ ಶಿಕ್ಷಕಿ, ಸಹಾಯಕಿಯರು ಮಕ್ಕಳನ್ನ ಸುಧಾರಿಸಿ ಪಾಠ ಕಲಿಸೋದು, ಅಲ್ದೇ ಅ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವಂತ ಕೆಲ್ಸ ಸಹ ಮಾಡ್ತಾರೆ. ಅದಕ್ಕಾಗಿಯೇ ಅಂಗನವಾಡಿ ಶಿಕ್ಷಕಿ, ಸಹಾಯಕಿಯರನ್ನ ಮಕ್ಕಳಿಗೆ ಎರಡನೇ ತಾಯಿ ಅನ್ಬೋದು ಎಂದು ತಿಳಿಸಿದರು.
ಒಟ್ಟಿನಲ್ಲಿ ಕೊರಟಗೆರೆ ತಾಲೂಕಿನಲ್ಲಿ ಪೋಷಣ್ ಪಖ್ವಾಡ್ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಮಕ್ಕಳಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸುವಲ್ಲಿ ಈ ಅಭಿಯಾನ ನೆರವಾಗಲಿರೋದಂತೂ ಸತ್ಯ.