ತುಮಕೂರಿನಲ್ಲಿ 13 ವರ್ಷದ ಬಾಲಕ ಆತ್ಮಹತ್ಯೆಗೆ ಶರಣು

 ಮೃತ ಬಾಲಕ ತ್ರಿಶಾಲ್
ಮೃತ ಬಾಲಕ ತ್ರಿಶಾಲ್
ತುಮಕೂರು

ತುಮಕೂರು ನಗರದ ವಿಜಯನಗರದ ಆರನೇ ಮುಖ್ಯರಸ್ತೆಯಲ್ಲಿ 13 ವರ್ಷದ ತ್ರಿಶಾಲ್‌ ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ. ಬಿಜೆಪಿ ಮುಖಂಡೆ, ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಂಚಾಲಕಿ ಶಕುಂತಲಾ ನಟರಾಜ್‌ ಪುತ್ರನಾಗಿರೋ ತ್ರಿಶಾಲ್‌ ಸರ್ವೋದಯ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಇಂದು ಬೆಳಿಗ್ಗೆ ಶಾಲೆಗೆ ಹೋಗುವ ಹೊತ್ತಿನಲ್ಲಿ, ಶಾಲಾ ಸಮವಸ್ತ್ರದಲ್ಲಿಯೇ ರೂಮ್‌ನಲ್ಲಿರೋ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸ್ಥಳದಲ್ಲಿ ಬಾಲಕನ ಹಸ್ತಾಕ್ಷರವಿರೋ ಡೆತ್ ನೋಟ್‌ ಕೂಡ ಪತ್ತೆಯಾಗಿದೆ. ಡೆತ್‌ ನೋಟ್‌ನಲ್ಲಿ ಹಲವು ವಿಚಾರಗಳು ಕೂಡ ಬೆಳಕಿಗೆ ಬಂದಿವೆ. ತ್ರಿಶಾಲ್‌ ಆತ್ಮಹತ್ಯೆಗೆ ಸ್ನೇಹಿತರ ಜೊತೆಗೆ ನಡೆದಿದ್ದ ಗಲಾಟೆಯೇ ಕಾರಣವಾಯ್ತಾ ಎಂಬ ಅನುಮಾನ ಪೋಷಕರಲ್ಲಿ ಮೂಡಿದೆ. ಮೃತ ಬಾಲಕ ತ್ರಿಶಾಲ್‌ ಪಾರಿವಾಳಗಳನ್ನು ಸಾಕಿ ಅವುಗಳನ್ನು  ಮಾರಾಟ ಮಾಡುವ ಬಿಸಿನೆಸ್‌ ಮಾಡ್ತಿದ್ದ. ಜೊತೆಗೆ ಪಾರಿವಾಳಗಳ ಬಾಜಿ ಕಟ್ಟುತ್ತಿದ್ದ. ಸ್ನೇಹಿತರೊಂದಿಗೆ ೧೪ ಸಾವಿರ ರೂಪಾಯಿ ಬಾಜಿ ಕಟ್ಟಿದ್ದ ಬಾಜಿ ವಿಚಾರಕ್ಕೆ ನಿನ್ನೆ ಸ್ನೇಹಿತರೊಂದಿಗೆ ಶಾಲಾ ಆವರಣದಲ್ಲಿ ಹಾಗೂ ಮನೆಯ ಬಳಿ ಜಗಳವಾಗಿತ್ತು ಎಂದು ತಿಳಿದುಬಂದಿದೆ. ೬-೭ ಹುಡುಗರು ತ್ರಿಶಾಲ್‌ ಜೊತೆ ಜಗಳ ಮಾಡಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ತಾಯಿ ಶಕುಂತಲಾ ನಟರಾಜ್‌ ಒಂದು ಕಡೆ ಪಕ್ಷದ ಕೆಲಸದಲ್ಲಿ ಹಾಗೂ ತಮ್ಮ ತೋಟದಲ್ಲಿ ಟೊಮ್ಯಾಟೋ ಮತ್ತು ಪಪ್ಪಾಯಿ ಬೆಳೆಯುತ್ತಿದ್ದರು. ಹೀಗಾಗಿ ಮಗನ ಮೇಲೆ ಹೆಚ್ಚು ಗಮನ ನೀಡಿತ್ತಿರಲ್ಲಿಲ್ಲ. ಜೊತೆಗೆ ಇವತ್ತು ಕೂಡ ತೋಟಕ್ಕೆ ಹೋಗಿದ್ದ ವೇಳೆ ತ್ರಿಶಾಲ್‌ ನೇಣಿಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ.

ಈ ಪ್ರಕರಣದ ಬಗ್ಗೆ ಹಲವು ಅನುಮಾನಗಳು ಮೂಡಿದ್ದು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಪ್ರಶ್ನೆಗಳು ಮೂಡಿದ್ದು. ಜಯನಗರ ಪೊಲೀಸ್‌ ಠಾಣೆಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Author:

...
Editor

ManyaSoft Admin

Ads in Post
share
No Reviews