ಉತ್ತರ ಕನ್ನಡ: ಮಗಳು, ಅಳಿಯನಿಗೆ ಚಾಕು ಇರಿದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಅಪ್ಪ
ಶಿವರಾತ್ರಿ ಹಬ್ಬಕ್ಕೆಂದು ಮನೆಗೆ ಬಂದಿದ್ದ ಮಗಳು, ಅಳಿಯನಿಗೆ ಚಾಕು ಇರಿದ ತಂದೆ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪ ರಂಗಾಪುರದಲ್ಲಿ ಬುಧವಾರ ನಡೆದಿದೆ.