ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ 9,600 ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ನೇಮಕಾತಿ!

ರಾಜ್ಯದಲ್ಲಿ ಖಾಲಿ ಇದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, 2025-26ನೇ ಸಾಲಿನ ಆನ್ಲೈನ್ ನೇಮಕಾತಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಅಧಿಕೃತ ಮಾಹಿತಿಯ ಪ್ರಕಾರ, ರಾಜ್ಯದ 31 ಜಿಲ್ಲೆಗಳಲ್ಲಿ ಒಟ್ಟು 9,615 ಹುದ್ದೆಗಳು ಭರ್ತಿಯಾಗಿದ್ದು, ಸಾವಿರಾರು ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ದೊರೆತಿದೆ.

ಒಟ್ಟು ನೇಮಕಾತಿ ವಿವರ
ನೇಮಕಗೊಂಡ ಅಂಗನವಾಡಿ ಕಾರ್ಯಕರ್ತೆಯರು: 2,347
ನೇಮಕಗೊಂಡ ಅಂಗನವಾಡಿ ಸಹಾಯಕಿಯರು: 7,268
ಒಟ್ಟು ಒಟ್ಟಾರೆ ನೇಮಕಾತಿ: 9,615 ಹುದ್ದೆಗಳು
ಇದನ್ನು ಓದಿ : ಉದ್ಯೋಗಾಕಾಂಕ್ಷಿಗಳಿಗೆ ಶೀಘ್ರವೇ 72,000 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

ಹೆಚ್ಚು ನೇಮಕಾತಿ ಹೊಂದಿದ ಪ್ರಮುಖ ಜಿಲ್ಲೆಗಳು
ನೇಮಕಾತಿ ವಿವರಗಳ ಪ್ರಕಾರ, ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ನೇಮಕಾತಿ ನಡೆದಿದ್ದು, 186 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 556 ಸಹಾಯಕಿಯರನ್ನು ಆಯ್ಕೆ ಮಾಡಲಾಗಿದೆ.
ಹಾಸನ ಜಿಲ್ಲೆಯಲ್ಲಿ 182 ಕಾರ್ಯಕರ್ತೆಯರು ಮತ್ತು 472 ಸಹಾಯಕಿಯರು, ಯಾದಗಿರಿ ಜಿಲ್ಲೆಯಲ್ಲಿ 158 ಕಾರ್ಯಕರ್ತೆಯರು ಹಾಗೂ 283 ಸಹಾಯಕಿಯರು, ಬೆಂಗಳೂರು ನಗರದಲ್ಲಿ 118 ಕಾರ್ಯಕರ್ತೆಯರು ಮತ್ತು 330 ಸಹಾಯಕಿಯರು ನೇಮಕಗೊಂಡಿದ್ದಾರೆ.ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ 59 ಕಾರ್ಯಕರ್ತೆಯರು ಹಾಗೂ 494 ಸಹಾಯಕಿಯರು ಆಯ್ಕೆಯಾಗಿದ್ದು, ಸಹಾಯಕಿಯರ ನೇಮಕಾತಿಯಲ್ಲಿ ಜಿಲ್ಲೆಯು ಪ್ರಮುಖ ಸ್ಥಾನದಲ್ಲಿದೆ.

ಧಾರವಾಡ ಜಿಲ್ಲೆಯಲ್ಲಿ ಅತಿ ಕಡಿಮೆ ನೇಮಕಾತಿ ದಾಖಲಾಗಿದ್ದು, ಕೇವಲ 6 ಕಾರ್ಯಕರ್ತೆಯರನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಸಹಾಯಕಿಯರ ನೇಮಕಾತಿ ಸಂಖ್ಯೆ ಶೂನ್ಯ (0) ಎಂದು ವರದಿಯಾಗಿದೆ.

ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣ
ಆನ್ಲೈನ್ ಪಾರದರ್ಶಕ ವ್ಯವಸ್ಥೆಯ ಮೂಲಕ ಈ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶಗಳ ಅಂಗನವಾಡಿ ಕೇಂದ್ರಗಳ ಸುಗಮ ನಿರ್ವಹಣೆಗೆ ಇದು ಮತ್ತಷ್ಟು ಬಲ ತುಂಬಲಿದೆ ಎನ್ನಲಾಗಿದೆ.
ಇದನ್ನು ನೋಡಿ : 4 ವರ್ಷವಾದ್ರೂ ಪೂರ್ಣಗೊಳ್ಳದ ಪಂ. ಕಟ್ಟಡ – ಶೆಡ್ನಲ್ಲೇ ಮುಂದುವರಿದ ಕೆಲಸಗಳು.!




