ಬೆಳಗಾವಿ ಜಿಲ್ಲೆಯ Mudalagi ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಈಜಲು ಹಳ್ಳಕ್ಕೆ ಇಳಿದಿದ್ದ ಸಹೋದರರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯ Mudalagi ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಈಜಲು ಹಳ್ಳಕ್ಕೆ ಇಳಿದಿದ್ದ ಅಣ್ಣ-ತಮ್ಮ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ದುರಂತದಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಮೃತರನ್ನು ಧರ್ಮಟ್ಟಿ ಗ್ರಾಮದ ಸಾಗರ್ ಮಾದರ (15) ಮತ್ತು ಪ್ರವೀಣ್ ಮಾದರ (13) ಎಂದು ಗುರುತಿಸಲಾಗಿದೆ. ಇಬ್ಬರೂ ಸಹೋದರರು ಹಳ್ಳದಲ್ಲಿ ಈಜಲು ತೆರಳಿದ್ದರು.ಈ ವೇಳೆ ಕಿರಿಯ ಸಹೋದರ ಪ್ರವೀಣ್ ನೀರಿನಲ್ಲಿ ಮುಳುಗತೊಡಗಿದ್ದಾನೆ. ಇದನ್ನು ಗಮನಿಸಿದ ಅಣ್ಣ ಸಾಗರ್ ತಮ್ಮನನ್ನು ರಕ್ಷಿಸಲು ನೀರಿಗೆ ಇಳಿದಿದ್ದಾನೆ.

ತಮ್ಮನನ್ನು ಉಳಿಸಲು ಹೋಗಿ ಅಣ್ಣನೂ ನೀರುಪಾಲು
ತಮ್ಮನನ್ನು ರಕ್ಷಿಸಲು ಪ್ರಯತ್ನಿಸಿದ ಸಾಗರ್ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾನೆ. ಪರಿಣಾಮ ಇಬ್ಬರೂ ಸಹೋದರರು ನೀರುಪಾಲಾಗಿದ್ದಾರೆ.
ಸ್ಥಳೀಯರು ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ನೀರಿನಿಂದ ಹೊರತೆಗೆದಿದ್ದಾರೆ.

ಕುಟುಂಬದಲ್ಲಿ ಆಕ್ರಂದನ
ಒಂದೇ ದಿನ ಇಬ್ಬರು ಮಕ್ಕಳನ್ನು ಕಳೆದುಕೊಂಡ ಪೋಷಕರ ದುಃಖ ಹೇಳತೀರದಂತಾಗಿದೆ. ಘಟನೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ಧರ್ಮಟ್ಟಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಘಟನೆ ಮೂಡಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
MUST WATCH :ತಿಪಟೂರಲ್ಲಿ SIR ಪ್ರಕ್ರಿಯೆ ಶುರು – ಆತಂಕ ಪಡಬೇಡಿ ಎಂದ ಆಯುಕ್ತರು | TIPTUR NEWS |




