Kitchen Recipe : ವರ್ಷದ ಮೊದಲ ಹಬ್ಬವೇ ಮಕರ ಸಂಕ್ರಾಂತಿ. ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಸಂಕ್ರಾಂತಿ ಹಬ್ಬ ಅಂದರೆ ಹಬ್ಬದ ಊಟದಲ್ಲಿ ಸಿಹಿ ಪೊಂಗಲ್ ವಿಶೇಷ ಸ್ಥಾನ ಹೊಂದಿದೆ.

Kitchen Recipe : ಇಂದು ನಾವು ಸಿಂಪಲ್ ಆಗಿ ಮನೆಯಲ್ಲೇ ಸಿಹಿ ಪೊಂಗಲ್ ಮಾಡುವ ವಿಧಾನವನ್ನು ತಿಳಿಸುತ್ತಿದ್ದೇವೆ. ಹಬ್ಬದ ದಿನ ನೀವೂ ಇದನ್ನೊಮ್ಮೆ ಟ್ರೈ ಮಾಡಿ
ಬೇಕಾಗುವ ಸಾಮಗ್ರಿಗಳು (Ingredients for Sweet Pongal)
- ಅಕ್ಕಿ – 1 ಕಪ್
- ಹೆಸರುಬೇಳೆ – 1 ಕಪ್
- ಬೆಲ್ಲ – 1½ ಕಪ್
- ಒಣದ್ರಾಕ್ಷಿ – 10
- ಗೋಡಂಬಿ – 10
- ಲವಂಗ – 1
- ಏಲಕ್ಕಿ ಪುಡಿ – ¼ ಚಮಚ
- ತುಪ್ಪ – ¼ ಚಮಚ
- ಖಾದ್ಯ ಕರ್ಪೂರ / ಪಚ್ಚೆ ಕರ್ಪೂರ – ಸಣ್ಣ ಪೀಸ್
- ಕಾಯಿತುರಿ – ¼ ಕಪ್
- ಹಾಲು – 1 ಕಪ್
ಇದನ್ನು ಓದಿ : ಎರಡನೇ ಮದುವೆಯಾಗಿದ್ದಕ್ಕೆ ಹೆಂಡ್ತಿ ಪ್ರಶ್ನೆ – ಶಬರಿಮಲೆಗೆ ಹೋಗಿ ಬಂದು WIFE MURDER
ಸಿಹಿ ಪೊಂಗಲ್ ಮಾಡುವ ವಿಧಾನ (Sweet Pongal Preparation Method)
ಮೊದಲಿಗೆ ಅಕ್ಕಿ ಮತ್ತು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ಗೆ ಹಾಕಿ. ಇದಕ್ಕೆ 3 ಕಪ್ ನೀರು ಸೇರಿಸಿ ಮುಚ್ಚಳ ಮುಚ್ಚಿ 4–5 ಸೀಟಿ ಕೂಗಿಸಿಕೊಳ್ಳಿ.
ಇನ್ನೊಂದು ಪಾತ್ರೆಯಲ್ಲಿ ಬೆಲ್ಲ ಮತ್ತು ಸ್ವಲ್ಪ ನೀರು ಹಾಕಿ ಸ್ಟವ್ ಮೇಲೆ ಕುದಿಯಲು ಬಿಡಿ. ಜೊತೆಗೆ ಸಣ್ಣ ಪೀಸ್ ಖಾದ್ಯ ಕರ್ಪೂರ ಸೇರಿಸಿ. ಬೆಲ್ಲ ಸಂಪೂರ್ಣ ಕರಗಿದ ಬಳಿಕ ಈ ಪಾಕವನ್ನು ಬೇಯಿಸಿದ ಅಕ್ಕಿ–ಬೇಳೆಗೆ ಸೇರಿಸಿ ಚೆನ್ನಾಗಿ ಕಲಸಿ.
ಇದಾದ ನಂತರ ಕಾಯಿತುರಿ, ಏಲಕ್ಕಿ ಪುಡಿ ಮತ್ತು 1 ಕಪ್ ಹಾಲು ಸೇರಿಸಿ. ಮತ್ತೊಂದೆಡೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಚಿನ್ನದ ಬಣ್ಣ ಬರುವವರೆಗೂ ಹುರಿಯಿರಿ. ಇದನ್ನೂ ಪೊಂಗಲ್ಗೆ ಸೇರಿಸಿ.
ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ 5 ನಿಮಿಷಗಳ ಕಾಲ ಮೃದುವಾಗಿ ಬೇಯಿಸಿ. ನಂತರ ಸರ್ವಿಂಗ್ ಪ್ಲೇಟ್ಗೆ ಹಾಕಿ ಬಿಸಿ ಬಿಸಿಯಾಗಿ ಸವಿಯಿರಿ
ಸಂಕ್ರಾಂತಿ ವಿಶೇಷ ಸಿಹಿ ಪೊಂಗಲ್
ಸಾಧಾರಣ ಸಾಮಗ್ರಿಗಳೊಂದಿಗೆ ಸುಲಭವಾಗಿ ಮಾಡುವ ಈ ಸಿಹಿ ಪೊಂಗಲ್ ರೆಸಿಪಿ ಸಂಕ್ರಾಂತಿ ಹಬ್ಬಕ್ಕೆ ಪರಿಪೂರ್ಣ. ಮನೆಮಂದಿಯೆಲ್ಲರಿಗೂ ಖಂಡಿತ ಇಷ್ಟವಾಗುವ ಈ ರೆಸಿಪಿಯನ್ನು ನೀವು ಕೂಡ ಪ್ರಯತ್ನಿಸಿ.
✨ Happy Makara Sankranti! ✨
ಇದನ್ನು ನೋಡಿ : ವ್ಯಕ್ತಿಗೆ ಹಾವು ಕಡಿತ – ಆಂಬುಲೆನ್ಸ್ ಸಿಗದೇ ಪರದಾಡಿದ ಕುಟುಂಬಸ್ಥರು




