ಹೈಕಮಾಂಡ್ನಿಂದ CM ಸಿದ್ದರಾಮಯ್ಯಗೆ ದೆಹಲಿ ಬುಲಾವ್ ಯಾಕೆ?

ಕಳೆದ ಕೆಲ ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕಚ್ಚಾಟ ನಡೆಯುತ್ತಿದ್ದು, ಪವರ್ ಶೇರಿಂಗ್ ಇದೀಗ ಕ್ಲೈಮೆಕ್ಸ್ ಹಂತಕ್ಕೆ ತಲುಪಿದಂತೆ ಕಾಣುತ್ತಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷ ಪೂರ್ಣಗೊಂಡ ಬೆನ್ನಲ್ಲೇ CM ಸಿದ್ದರಾಮಯ್ಯಗೆ ಹೈಕಮಾಂಡ್ ತುರ್ತು ಬುಲಾವ್ ನೀಡಿದೆ.
ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸಿದ್ದು ಸಿಎಂ ಸ್ಥಾನ ಉಳಿಸಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಇಂದು ರಾತ್ರಿಯೇ ತಮ್ಮ ಆಪ್ತ ಸಚಿವರ ಜೊತೆ ದೆಹಲಿ ದಂಡಯಾತ್ರೆ ಕೈಗೊಳ್ಳಲಿದ್ದಾರೆ.

ಸಿದ್ದು ಅವರನ್ನು ಮಾತ್ರ ದೆಹಲಿಗೆ ಬರುವಂತೆ ಆಹ್ವಾನ
ಕಾಂಗ್ರೆಸ್ ಹೈಕಮಾಂಡ್ ಕೇವಲ ಸಿದ್ದರಾಮಯ್ಯ ಅವರನ್ನು ಮಾತ್ರ ದೆಹಲಿಗೆ ಬರುವಂತೆ ಆಹ್ವಾನ ನೀಡಿದೆ. ಆದ್ರೆ ತೆರೆಮರೆಯಲ್ಲಿ ಸಿದ್ದು ತಮ್ಮ ಆಪ್ತ ಸಚಿವರಿಗೆ ಕಾಲ್ ಮಾಡಿ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರಂತೆ.
ಸಿಎಂ ಕರೆ ಬೆನ್ನಲ್ಲೇ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಪ್ರಮುಖ ನಾಯಕರು ಸಿಎಂ ಜೊತೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಹೇಳಲಾಗ್ತಿದೆ.
ಹೈಕಮಾಂಡ್ ಮುಂದೆ ತಮ್ಮ ಸಂಖ್ಯಾಬಲ ಹಾಗೂ ನಾಯಕರ ಬೆಂಬಲವನ್ನು ಪರೋಕ್ಷವಾಗಿ ಪ್ರದರ್ಶಿಸಲು ಸಿದ್ದರಾಮಯ್ಯಈ ತಂತ್ರಗಾರಿಕೆ ನಡೆಸಿದ್ದಾರೆ ಎನ್ನಲಾಗಿದೆ.

ಖರ್ಗೆ ಹಾಗೂ ರಾಹುಲ್ ಗಾಂಧಿ ಜೊತೆ ಹೈವೋಲ್ಟೇಜ್ ಸಭೆ
ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಯ ನೆಪದಲ್ಲಿ ಸಿಎಂಗೆ ಹೈಕಮಾಂಡ್ ಬುಲಾವ್ ನೀಡಲಾಗಿದೆ ಎಂದು ಹೇಳಲಾಗ್ತಿದ್ದು, ನಾಳೆ ಬೆಳಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಜೊತೆ ಹೈವೋಲ್ಟೇಜ್ ಸಭೆ ನಡೆಯಲಿದೆ.
ಮೊದಲು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ರಾಹುಲ್ ಗಾಂಧಿ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ. ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿ ಮಾತನಾಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗ್ತಿದೆ.
READ THIS : ಇಂದಿನಿಂದ ರಾಜ್ಯದಾದ್ಯಂತ ಅತ್ಯಾಧುನಿಕ ಆ್ಯಂಬುಲೆನ್ಸ್ ಸೇವೆ ಲಭ್ಯ – CM

ಹೈಕಮಾಂಡ್ ಬುಲಾವ್ ಕುರಿತು DCM ಹೇಳಿದ್ದೇನು?
ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬುಲಾವ್ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸಿಎಂ ಅವರನ್ನು ಯಾಕೆ ಕರೆದಿದ್ದಾರೆ ಎಂಬುದು ತಮಗೆ ತಿಳಿದಿಲ್ಲ.
ಸಿಎಂ ನನಗೆ ಏನೂ ಹೇಳಿಲ್ಲ, ಹೈಕಮಾಂಡ್ನಿಂದ ತಮಗೆ ಕರೆ ಬಂದಿಲ್ಲ. ಕರೆದರೆ ಹೋಗುವುದಾಗಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಪಾಲಿಗೆ ಗುಡ್ನ್ಯೂಸ್ ಸಿಗುತ್ತಾ?
ಇನ್ನು ಹೈಕಮಾಂಡ್ ಬುಲಾವ್ ಸಿದ್ದರಾಮಯ್ಯ ಪಾಲಿಗೆ ಗುಡ್ನ್ಯೂಸ್ ಸಿಗುತ್ತಾ ಅಥವಾ ಶಾಕ್ ನೀಡುತ್ತಾ ಅನ್ನೋದು ನಾಳೆ ತೀರ್ಮಾನ ಆಗಲಿದೆ.
ಇತ್ತ ಸಿಎಂ ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ, ಕೇಂದ್ರ ರಾಜಕಾರಣಕ್ಕೆ ಬರುವಂತೆ ಆಹ್ವಾನಿಸಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಹಾದಿ ಸುಗಮಗೊಳಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಎಲ್ಲದಕ್ಕೂ ನಾಳೆ ತೆರೆ ಬೀಳುವ ಸಾಧ್ಯತೆ ಇದೆ.

MUST WATCH : ಬಿರುಕು ಬಿಟ್ಟಿದೆ ಶಾಲೆ ಕಾಂಪೌಂಡ್ – ಯಾವ ಕ್ಷಣದಲ್ಲಾದ್ರೂ ಕುಸಿಯುವ ಭೀತಿ..!




