GBA ಚುನಾವಣೆ – ಜೂ.14 ರಿಂದ 24ರ ಒಳಗೆ ದಿನಾಂಕ ಘೋಷಣೆಗೆ ಸೂಚನೆ

ಕೊನೆಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಮುಹೂರ್ತ ಕೂಡಿಬಂದಿದೆ. ಮುಂದಿನ ಜೂನ್ 14 ರಿಂದ 24ರ ಒಳಗೆ ದಿನಾಂಕ ಘೋಷಣೆ ಮಾಡುವಂತೆ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎ ಸಂಗ್ರೇಶಿ ಸೂಚನೆ ನೀಡಿದ್ದಾರೆ.
ಇನ್ನು ಚುನಾವಣೆಯ ಅಂತಿಮ ದಿನಾಂಕ ಮಾತ್ರ ಘೋಷಣೆಯಾಗಬೇಕಿದ್ದು, ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ಆಯುಕ್ತರು ಹೇಳಿದ್ದೇನು?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೂನ್ 14ರಿಂದ ಜೂನ್ 24ರ ಒಳಗಾಗಿ ಒಂದು ಡೇಟ್ ಹೇಳಲು ಸೂಚನೆ ನೀಡಿದ್ದೇವೆ ಒಂದು ದಿನಾಂಕ ಹೇಳಿ ಅಂತ ಸೂಚನೆ ಕೊಟ್ಟಿದ್ದೇವೆ.
ಈ ಅಂತರದಲ್ಲಿಯೇ GBA ಚುನಾವಣೆ ದಿನಾಂಕ ಘೋಷಣೆ ಆಗಬೇಕು ಕೆಲವೇ ದಿನಗಳಲ್ಲಿ ಜಿಬಿಎ ಚುನಾವಣೆಗೆ ಅಂತಿಮ ದಿನಾಂಕ ತಿಳಿಸುತ್ತೇವೆ.
ಮುಂದೂಡಿಕೆ ಮಾಡುವ ಅಧಿಕಾರ ಸುಪ್ರೀಂ ಕೋರ್ಟ್ ಗೆ ಮಾತ್ರ ಇದೆ. ಜೂನ್ 30ರ ಒಳಗಾಗಿ ಜಿಬಿಎ ಚುನಾವಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ ನಿಗದಿತ ಕಾಳಮಿತಿಯಲ್ಲಿ ಚುನಾವಣೆ ಮುಗಿಸಿ ನಾವು ವರದಿ ಕೊಡಬೇಕು ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ನಾವು ನಡೆಯಬೇಕಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೆಶಿ ಹೇಳಿಕೆ ನೀಡಿದರು.

READ THIS : ಮೇ 11ರಂದು ಉಮೇಶ್ ಮೇಟಿ, ಸಮರ್ಥ ಶಾಮನೂರು ಶಾಸಕರಾಗಿ ಪ್ರಮಾಣವಚನ ಸ್ವೀಕಾರ!
ಸಿದ್ದತೆಗಳು ಪೂರ್ಣ
ಚುನಾವಣಾ ಆಯೋಗವು ಮತದಾರರ ಪಟ್ಟಿ, ಮತಗಟ್ಟೆಗಳ ವ್ಯವಸ್ಥೆ ಹಾಗೂ ಸಿಬ್ಬಂದಿ ನಿಯೋಜನೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಕೇವಲ ಅಧಿಕೃತ ದಿನಾಂಕ ಘೋಷಣೆ ಮಾತ್ರ ಬಾಕಿಯಾಗಿದೆ ಎಂದು ಆಯುಕ್ತರು ಹೇಳಿದರು.
ದಿನಾಂಕ ನಿಗದಿಗೆ ಮಾನದಂಡ
ದಿನಾಂಕ ನಿಗದಿಪಡಿಸುವ ಸಂದರ್ಭದಲ್ಲಿ ಮುಂಗಾರು ಮಳೆ ಆರಂಭ ಹಾಗೂ ಶಾಲಾ-ಕಾಲೇಜುಗಳ ಪುನರಾರಂಭವನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತಿದೆ.
ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಕೊನೆಯ ಹಂತದ ಚರ್ಚೆ
GBA ಸೂಚನೆಯಂತೆ ಜೂನ್ 14ರಿಂದ 24ರ ನಡುವೆ ಮತದಾನ ಪ್ರಕ್ರಿಯೆ ಮುಗಿಸಲು ಯೋಜನೆ ರೂಪಿಸಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಅಂತಿಮ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಆಯೋಗ ತಿಳಿಸಿದೆ.
MUST WATCH : ಬೆಂಗಳೂರಿನಿಂದ IPL MATCH SHIFT – ಗೃಹ ಸಚಿವ PARAMESHWAR ಏನಂದ್ರು




