Bengaluru : ಪುಷ್ಪಾ ಸಿನಿಮಾ ಸ್ಟೈಲ್ನಲ್ಲಿ ಗಾಂಜಾ ಸಾಗಾಟ.! 250 ಕೆಜಿ ಗಾಂಜಾ ವಶಕ್ಕೆ ಪಡೆದು ಆರೋಪಿಗಳ ಬಂಧನ

Bengaluru ನಗರದಲ್ಲಿ ದಿನೇ ದಿನೇ ಡ್ರಗ್ ಪೆಡ್ಲರ್ಗಳ ಹಾವಳಿ ಹೆಚ್ಚಾಗುತ್ತಿದ್ದು, ಇದೀಗ ಪುಷ್ಪಾ ಸಿನಿಮಾ ಸ್ಟೈಲ್ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವೊಂದನ್ನ ಜಿಗಣಿ ಪೊಲೀಸರು ಭೇದಿಸಿದ್ದಾರೆ. ಪೌಲ್ಟ್ರಿ ಫೀಡ್ಸ್ ವಾಹನದೊಳಗೆ ಗಾಂಜಾವನ್ನ ಅಡಗಿಸಿ ಸಾಗಿಸುತ್ತಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಭಾರೀ ಪ್ರಮಾಣದ ಗಾಂಜಾವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

250 ಕೆಜಿ ಗಾಂಜಾ ವಶಕ್ಕೆ ಪಡೆದ ಜಿಗಣಿ ಪೊಲೀಸರು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೇಗೂರು ಮುಖ್ಯರಸ್ತೆಯ ಕೊಪ್ಪ ಬಳಿ ಈ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೆರೆಗೆ ಜಿಗಣಿ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಪೌಲ್ಟ್ರಿ ಫೀಡ್ಸ್ ಸಾಗಿಸುತ್ತಿದ್ದ ವಾಹನದ ಮೇಲೆ ರೇಡ್ ಮಾಡಿದ್ದಾರೆ. ಈ ವೇಳೆ ವಾಹನದಲ್ಲಿ ಗಾಂಜಾ ಸಾಗಿಸುತ್ತಿರೋದು ಪತ್ತೆಯಾಗಿದೆ. ಒಡಿಶಾದಿಂದ ಲೋಡ್ ಆಗಿ ಬಂದಿದ್ದ ಗಾಂಜಾವನ್ನು, ಯಾರಿಗೂ ಅನುಮಾನ ಬರದಂತೆ ಪೌಲ್ಟ್ರಿ ಫೀಡ್ಸ್ ಚೀಲಗಳ ಮಧ್ಯೆ ಅಡಗಿಸಿ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ದಾಳಿ ವೇಳೆ ಬರೋಬ್ಬರಿ 250 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ ಸುಮಾರು 1 ಕೋಟಿ 25 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
READ THIS : GBA ELECTION|ಜೂನ್ 20-24ರೊಳಗೆ ಐದು ಪಾಲಿಕೆಗಳ ಚುನಾವಣೆ..!

Bengaluru -ಬಿಹಾರ ಮೂಲದ ಇಬ್ಬರು ಆರೋಪಿಗಳ ಬಂಧನ
ಸದ್ಯ ಪ್ರಕರಣ ಸಂಬಂಧ ಬಿಹಾರ ಮೂಲದ ರಾಮಾಯಣ್ ಯಾದವ್ ಹಾಗೂ ಸಬೀರ್ ಖಾನ್ ಎಂಬುವರನ್ನ ಬಂಧಿಸಿರುವ ಪೊಲೀಸರು, ಪ್ರಮುಖ ಆರೋಪಿಗಳಾದ ಬಿನೋದ್ ಸಿಂಗ್ ಮತ್ತು ಬಾಬುಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಇನ್ನು ಜಿಗಣಿ ಪೊಲೀಸರ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರ ಕಾಂತ್ ಹಾಗೂ ಅಡಿಷನಲ್ ಎಸ್ಪಿ ಲಕ್ಷ್ಮೀ ನಾರಾಯಣ್ ಪ್ರಶಂಸೆ ವ್ಯಕ್ತಪಡಿಸಿದ್ದು, ದಾಳಿ ನಡೆಸಿದ ಸಿಬ್ಬಂದಿಗೆ ಬಹುಮಾನ ಘೋಷಿಸಿದ್ದಾರೆ.
MUST WATCH : ಎಲ್ಲವೂ BJPಯ ಷಡ್ಯಂತ್ರ ಅಷ್ಟೇ – SRINGERI ಮರು ಮತ ಎಣಿಕೆಗೆ ಆಕ್ರೋಶ..!




